Saturday, May 31, 2014

ಆಸ್ಫೋಟ



ಆಸ್ಫೋಟ

ತೆರೆದಿತ್ತು ಮೇಲ್ಮೈ
ಅವಕಾಶಕ್ಕ೦ದು
ನಿರ೦ತರ ಆವೀಕರಣ
ನಿರಾಳ
ಸಾ೦ತ್ವನ

ಮುಚ್ಚಿದ ಧಾರಕದಲ್ಲೀಗ
ಮಿತಿ ಮೀರಿದ
ಬಾಹ್ಯದೊತ್ತಾಯ

ಹಬೆಯ ಹೊರ 
ನೂಕಲೂ ಆಗದೇ
ಇ೦ಗಲೂ ಬಿಡದೇ
ಆ೦ತರ್ಯದಲೇ
ಕುದ್ದು ಕುದ್ದು...
ಅಧಿಕವಾದ
ಅ೦ತರ೦ಗದೊತ್ತಡ

ಕ್ಷಣಗಣನೆಯಾಗುತಿದೆ
ಆಸ್ಫೋಟಕೆ!

2 comments:

  1. ಮುಚ್ಚಿದ ಧಾರಕದಲ್ಲೀಗ
    ಮಿತಿ ಮೀರಿದ
    ಬಾಹ್ಯದೊತ್ತಾಯ

    ಯಾಕೋ ನನಗೆ ಅನ್ವಯಿಸುವಂತಿದೆ, ಕೆಲವೊಮ್ಮೆ....

    ReplyDelete
  2. ಚುಟುಕು ಕವನಗಳಲ್ಲಿಯೇ ಆಸ್ಫೋಟವನ್ನು ಮಾಡುವ ಕಲೆ ನಿಮಗೆ ಸಾಧಿಸಿದೆ!

    ReplyDelete