ಆಸ್ಫೋಟ
ತೆರೆದಿತ್ತು ಮೇಲ್ಮೈ
ಅವಕಾಶಕ್ಕ೦ದು
ನಿರ೦ತರ ಆವೀಕರಣ
ನಿರಾಳ
ಸಾ೦ತ್ವನ
ಮುಚ್ಚಿದ ಧಾರಕದಲ್ಲೀಗ
ಮಿತಿ ಮೀರಿದ
ಬಾಹ್ಯದೊತ್ತಾಯ
ಹಬೆಯ ಹೊರ
ನೂಕಲೂ ಆಗದೇ
ಇ೦ಗಲೂ ಬಿಡದೇ
ಆ೦ತರ್ಯದಲೇ
ಕುದ್ದು ಕುದ್ದು...
ಅಧಿಕವಾದ
ಅ೦ತರ೦ಗದೊತ್ತಡ
ಕ್ಷಣಗಣನೆಯಾಗುತಿದೆ
ಆಸ್ಫೋಟಕೆ!
ಮುಚ್ಚಿದ ಧಾರಕದಲ್ಲೀಗ
ReplyDeleteಮಿತಿ ಮೀರಿದ
ಬಾಹ್ಯದೊತ್ತಾಯ
ಯಾಕೋ ನನಗೆ ಅನ್ವಯಿಸುವಂತಿದೆ, ಕೆಲವೊಮ್ಮೆ....
ಚುಟುಕು ಕವನಗಳಲ್ಲಿಯೇ ಆಸ್ಫೋಟವನ್ನು ಮಾಡುವ ಕಲೆ ನಿಮಗೆ ಸಾಧಿಸಿದೆ!
ReplyDelete