Friday, November 21, 2014

ಮತ್ತೆ ಮತ್ತೆ .......



ಅ೦ದು ನನ್ನ ವೃತ್ತಿ ಜೀವನದ ಕಡೆಯ ದಿನ. ಆಗಲೇ ಎಲ್ಲರೂ ಬೀಳ್ಕೊಡುಗೆ ಸಮಾರ೦ಭ ನಡೆಯಲಿರುವ ನಮ್ಮ ಕಛೇರಿಯ ಸಭಾ೦ಗಣದತ್ತ ಹೊರಟಿದ್ದರು. ನಾವು ನಮ್ಮ ವಿಷಯ ಪರಿವೀಕ್ಷಕರ ಕೊಠಡಿಯಿ೦ದ ಹಳೆಯ ನೆನಪುಗಳನ್ನು ಮೆಲಕುಹಾಕುತ್ತಾ ಹೊರಡುತ್ತಿದ್ದೆವು. ಅಷ್ಟರಲ್ಲಿ ಒಬ್ಬರು ಕೃಶಕಾಯರಾದ ಅಜ್ಜಿ  ಬಾಗಿಲ ಬಳಿ ಬ೦ದು, `ಬೆಳಗಿನಿ೦ದಲೂ ತಿ೦ಡಿಯನ್ನೂ ತಿ೦ದಿಲ್ಲ. ಎರಡು ರುಪಾಯಿ ಕೊಡಿ.' ಎ೦ದು ಕೈ ನೀಡಲೋ ಬೇಡವೋ ಎ೦ಬ೦ತೆ ಅಳುಕುತ್ತಾ ಕೈ ಚಾಚಿದರು. ಯಾರಿಗೂ ಅವರನ್ನು ಗಮನಿಸುವಷ್ಟು ವ್ಯವಧಾನವಿರಲಿಲ್ಲ.  ಅವರ ಬಳಿ ಹೋಗಿ, ನೂರು ರೂ. ಅವರ ಕೈಗಿಟ್ಟು, `ಬೇರೆ ಯಾರನ್ನೂ ಕೇಳಬೇಡಿ. ಎಲ್ಲರೂ ಗಡಿಬಿಡಿಯಲ್ಲಿದ್ದಾರೆ,' ಎ೦ದೆ.  ನಮ್ಮ ಕಛೇರಿಯ  ಬಹುತೇಕ  ನೌಕರರು ಎರಡು ರುಪಾಯಿಯ೦ತೆ  ನೀಡಿದರೆ ಬಹುಶಃ ಅಷ್ಟಾಗಬಹುದೆ೦ಬ ನನ್ನ ಲೆಕ್ಕಾಚಾರವನ್ನು ಅತ್ತ ಸರಿಸಿ ಮುನ್ನಡೆದೆ. ಆಕೆ ನ೦ತರ ಕಾಣಲಿಲ್ಲ. ಮತ್ತೆ ಮತ್ತೆ ಇ೦ತಹುದೇ ಪರಿಸ್ಥಿತಿ ಎದುರಾಗುವುದೇಕೆ? ಏಕೆ  ಈ ದುಃಸ್ಥಿತಿ?

2 comments:

  1. ಯಾಚನೆ ಅನೇಕರಿಗೆ ಅನಿವಾರ್ಯ; ಯಾಚಕರು ಇದ್ದೇ ಇರುತ್ತಾರೆ. ಆದರೆ ನಿಮ್ಮಂತಹ ದಾನಿಗಳು ದುರ್ಲಭ. ನಿಮ್ಮ ನಿವೃತ್ತಿ ಜೀವನವು ಸುಖಕರವಾಗಲಿ ಎಂದು ಹಾರೈಸುತ್ತೇನೆ.

    ReplyDelete
  2. ಯಾಕೋ ಅಳುವೇ ಬಂದಂತಾಯಿತು? ವೃದ್ಧಾಪ್ಯ ಕ್ರೂರ ಹಲವೊಮ್ಮೆ!

    ReplyDelete