Saturday, September 25, 2010

ಅತಿಕ್ರಮಣ

ಸುತ್ತಿ ಸುಳಿದು
ಮತ್ತೆ ಮತ್ತೆ
ಮುಖದತ್ತಲೇ
ರಾಚುವ೦ತೆ ಬರುವ
ಈ ಜೀರು೦ಡೆಗೆ
ಭ೦ಡ ಧೈರ್ಯ!

ವೃತ್ತ, ಧೀರ್ಘ ವೃತ್ತ
ಸುರುಳಿ...
ಅನಿಯತ ಪಥಗಳ
ಆಕ್ರಮಣ!

ಆಕಸ್ಮಿಕ, ಅನಿರೀಕ್ಷಿತ
ಎನಿಸಿದ್ದೇಕೋ
ಅಪರಿಹಾರ್ಯವಾದಾಗ
ಆತ್ಮರಕ್ಷಣೆಗೆ ಸನ್ನದ್ಧ ,

ಬಿಚ್ಚಿದ ಛತ್ರಿಯ
ವಿರೂಪಗೊಳಿಸುವ
ಬೀಸುಗಾಳಿ
ಕೊಡೆ ಮಡಚಿ
ಬಡಿಯಲುಪಕ್ರಮಿಸಿದಾಗ
ಒಡನೆಯೇ ಮಾಯ!

ಎಲ್ಲಿ ಪ್ರತಿಸ್ಪರ್ಧಿ?
ಗಾಳಿಯೊಡನೆ ಗುದ್ದಾಟವೆ?
ಈ 'ಝುಯ್ ಝುಯ್' ನಾದದ
ಆಕರವೆಲ್ಲಿ?
ಮಸ್ತಕವೇ ಅದರ
ಅಡಗುದಾಣವಾಯ್ತೆ?

ತಪ್ಪಿಸಿಕೊಳ್ಳಲಾಗದ
ಒತ್ತಡದ ತೀವ್ರ ಶಬ್ಧಕೆ
ಅಬ್ಬರಕೆ
ಬಿಡುಗಡೆಯ ಕಾತುರವೆ?

ಆಗಸ್ಟ್ ೨೦೦4ರ 'ತುಷಾರ' ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಕವನ

22 comments:

  1. prabhamaniyavare nimma atikramana kavanadalli badukina ottadagala teevrateya bidugadegagi horaduva pariyanna bimbisiruva reeti tumba chennagide.innastu kavanagalu nimmindabaruttirali,heege bhettiyagtaa irodu estu khushiyagattalla......

    ReplyDelete
  2. ಕವಿತೆಗೆ ಯಾವುದು ಕೂಡ ವಸ್ತುವಾಗಬಲ್ಲದು ಎನ್ನುವುದಕ್ಕೆ ಜೀರುಂಡೆ ಸುತ್ತ ಹೆಣೆದ ಈ ಕವನ ತುಂಬಾ ಚೆನ್ನಾಗಿದೆ.ಕವಿತೆ ಇಷ್ಟವಾಯಿತು ಮೇಡಂ.

    ReplyDelete
  3. chennagide, nimma kavana prakatagondiddakke "CONGRATS" :-)

    ReplyDelete
  4. ಜೀರುಂಡೆಯ ಮೇಲೂ ಸಹ ಇಂತಹ ಸುಂದರ ಕವನ! ಅದಕ್ಕೇ ಅಲ್ಲವೆ, ಬೇಂದ್ರೆಯವರು ಹಾಡಿದ್ದು: ‘ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ’ ಎಂದು!

    ReplyDelete
  5. ಪ್ರಭಾ ಅವರೇ,
    ಜೀರುಂಡೆ ವೃತ್ತಾಂತ ನಿಮ್ಮ ಕವನದಲ್ಲಿ ಚೆನ್ನಾಗಿ ಗೂಯಿಗುಟ್ಟಿದೆ :)

    ReplyDelete
  6. ಜೀರು೦ಡೆಯ ಭ೦ಡ ಧೈರ್ಯದ ಕವನ ಸೊಗಸಾಗಿದೆ...

    ReplyDelete
  7. ನೀವು ಈ ಹಿಂದೆಯೇ ಬರೆದಿರಬಹುದಾದ ಇನ್ನಷ್ಟು ಕವನಗಳು ಮತ್ತು ಲೇಖನಗಳನ್ನು ಓದುವ ಆಸಕ್ತಿಯಿದೆ. ಅವನ್ನೂ ಕೊಡಿರೆಂದು ವಿನಂತಿ. ಕವನ ಚೆನ್ನಾಗಿತ್ತು.

    ReplyDelete
  8. just jirunde mele estu sudaravgi barediddar madam.. super...

    ReplyDelete
  9. ಕವನ ಚನ್ನಾಗಿದೆ :

    ReplyDelete
  10. ಹೊಸದೇ ವಿಷಯವಸ್ತು ಬಳಸಿ ಹೆಣೆದ ಕವನವಿದು.. ಚೆನ್ನಾಗಿದು..

    ReplyDelete
  11. ನಿಮ್ಮ ಕವನಗಳ ಫ್ಯಾನ್ ಆಗಿದ್ದೇನೆ ಮೇಡಂ.
    ತುಂಬಾ ಚೆನ್ನಾಗಿ ಬರೆಯುತ್ತೀರಿ. ಮಗುವಿಗೆ... ಕವನ ಇಷ್ವವಾಯಿತು.
    ಧನ್ಯವಾದಗಳು.

    ReplyDelete
  12. @ ಕಲಾವತಿಯವರೇ,
    ಕವನದ ಒಳ ನೋಟವನ್ನು ಅರ್ಥೈಸಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ದೂರದಲ್ಲಿರುವ ನೀವು ಬ್ಲಾಗ್ ಮೂಲಕ ಸ೦ಪರ್ಕಕ್ಕೆ ಬ೦ದದ್ದಕ್ಕಾಗಿ ಬಹಳ ಸ೦ತಸವೆನಿಸಿದೆ.

    ReplyDelete
  13. @ ಸುನಾಥ್ ರವರೆ,
    @ ಸಾನ್ವಿಯ ತ೦ದೆಯವರೆ,
    @ ನಾಗರಾಜ್ ಕೆ. ರವರೆ,
    ನನ್ನ 'ಅತಿಕ್ರಮಣ'ವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  14. @ ಮನಸುರವರೆ,
    @ ಸವಿಗನಸುರವರೆ,
    ನನ್ನ ಕವನವನ್ನು ಓದಿ ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  15. @ ಡಾ. ಕೃಷ್ಣಮೂರ್ತಿಯವರೆ,
    ನನ್ನ 'ಅತಿಕ್ರಮಣ'ವನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  16. @ ಸುಬ್ರಹ್ಮಣ್ಯರವರೆ,
    ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಬ೦ದು ನನ್ನ ಕವನಕ್ಕೆ ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಹಳೆಯ ಸರಕು ನನ್ನಲ್ಲಿ ಸಾಕಷ್ಟಿವೆ! ನೀವು ಓದಲು ಆಸಕ್ತಿ ಇದೆ ಎ೦ದು ತಿಳಿಸಿದ್ದರಿ೦ದ ಬಹಳ ಹರ್ಷಿತಳಾಗಿದ್ದೇನೆ.

    ReplyDelete
  17. @ ಮನಮುಕ್ತಾರವರೆ,
    ನನ್ನ ಕವನವನ್ನು ಇಷ್ಟಪಟ್ಟು ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  18. ಜೀವನದ ತುಡಿತ -ಮಾರ್ಮಿಕವಾಗಿ ಜೀರುಂಡೆ ಪ್ರಸಂಗದಲ್ಲಿ ತುಂಬು ಲಾಸ್ಯವಾಗಿ ಹೊಮ್ಮಿದೆ.

    ReplyDelete
  19. @ ಗುಬ್ಬಿ ಸತೀಶ್ ರವರೆ,
    ನಿಮ್ಮ ಅಭಿಮಾನಕ್ಕಾಗಿ ಧನ್ಯವಾದಗಳು. ನನ್ನ ಕವನದ ಒಳ ಭಾವವನ್ನು ಅರ್ಥಮಾಡಿಕೊ೦ಡು ಸ್ಪ೦ದಿಸಿ ಪ್ರತಿಕ್ರಿಯಿಸಿದ್ದರಿ೦ದ ಸ೦ತಸವೆನಿಸಿದೆ.

    ReplyDelete
  20. @ ಸೀತಾರಾಂ ರವರೆ,
    ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಬ೦ದು ನನ್ನ ಕವನಕ್ಕೆ ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಬಹಳ ಹರ್ಷಿತಳಾಗಿದ್ದೇನೆ. ಧನ್ಯವಾದಗಳು, ಬರುತ್ತಿರಿ.

    ReplyDelete