Saturday, September 25, 2010

ಅತಿಕ್ರಮಣ

ಸುತ್ತಿ ಸುಳಿದು
ಮತ್ತೆ ಮತ್ತೆ
ಮುಖದತ್ತಲೇ
ರಾಚುವ೦ತೆ ಬರುವ
ಈ ಜೀರು೦ಡೆಗೆ
ಭ೦ಡ ಧೈರ್ಯ!

ವೃತ್ತ, ಧೀರ್ಘ ವೃತ್ತ
ಸುರುಳಿ...
ಅನಿಯತ ಪಥಗಳ
ಆಕ್ರಮಣ!

ಆಕಸ್ಮಿಕ, ಅನಿರೀಕ್ಷಿತ
ಎನಿಸಿದ್ದೇಕೋ
ಅಪರಿಹಾರ್ಯವಾದಾಗ
ಆತ್ಮರಕ್ಷಣೆಗೆ ಸನ್ನದ್ಧ ,

ಬಿಚ್ಚಿದ ಛತ್ರಿಯ
ವಿರೂಪಗೊಳಿಸುವ
ಬೀಸುಗಾಳಿ
ಕೊಡೆ ಮಡಚಿ
ಬಡಿಯಲುಪಕ್ರಮಿಸಿದಾಗ
ಒಡನೆಯೇ ಮಾಯ!

ಎಲ್ಲಿ ಪ್ರತಿಸ್ಪರ್ಧಿ?
ಗಾಳಿಯೊಡನೆ ಗುದ್ದಾಟವೆ?
ಈ 'ಝುಯ್ ಝುಯ್' ನಾದದ
ಆಕರವೆಲ್ಲಿ?
ಮಸ್ತಕವೇ ಅದರ
ಅಡಗುದಾಣವಾಯ್ತೆ?

ತಪ್ಪಿಸಿಕೊಳ್ಳಲಾಗದ
ಒತ್ತಡದ ತೀವ್ರ ಶಬ್ಧಕೆ
ಅಬ್ಬರಕೆ
ಬಿಡುಗಡೆಯ ಕಾತುರವೆ?

ಆಗಸ್ಟ್ ೨೦೦4ರ 'ತುಷಾರ' ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಕವನ

22 comments:

  1. prabhamaniyavare nimma atikramana kavanadalli badukina ottadagala teevrateya bidugadegagi horaduva pariyanna bimbisiruva reeti tumba chennagide.innastu kavanagalu nimmindabaruttirali,heege bhettiyagtaa irodu estu khushiyagattalla......

    ReplyDelete
  2. ಕವಿತೆಗೆ ಯಾವುದು ಕೂಡ ವಸ್ತುವಾಗಬಲ್ಲದು ಎನ್ನುವುದಕ್ಕೆ ಜೀರುಂಡೆ ಸುತ್ತ ಹೆಣೆದ ಈ ಕವನ ತುಂಬಾ ಚೆನ್ನಾಗಿದೆ.ಕವಿತೆ ಇಷ್ಟವಾಯಿತು ಮೇಡಂ.

    ReplyDelete
  3. chennagide, nimma kavana prakatagondiddakke "CONGRATS" :-)

    ReplyDelete
  4. ಜೀರುಂಡೆಯ ಮೇಲೂ ಸಹ ಇಂತಹ ಸುಂದರ ಕವನ! ಅದಕ್ಕೇ ಅಲ್ಲವೆ, ಬೇಂದ್ರೆಯವರು ಹಾಡಿದ್ದು: ‘ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸಾ’ ಎಂದು!

    ReplyDelete
  5. ಪ್ರಭಾ ಅವರೇ,
    ಜೀರುಂಡೆ ವೃತ್ತಾಂತ ನಿಮ್ಮ ಕವನದಲ್ಲಿ ಚೆನ್ನಾಗಿ ಗೂಯಿಗುಟ್ಟಿದೆ :)

    ReplyDelete
  6. ಜೀರು೦ಡೆಯ ಭ೦ಡ ಧೈರ್ಯದ ಕವನ ಸೊಗಸಾಗಿದೆ...

    ReplyDelete
  7. ನೀವು ಈ ಹಿಂದೆಯೇ ಬರೆದಿರಬಹುದಾದ ಇನ್ನಷ್ಟು ಕವನಗಳು ಮತ್ತು ಲೇಖನಗಳನ್ನು ಓದುವ ಆಸಕ್ತಿಯಿದೆ. ಅವನ್ನೂ ಕೊಡಿರೆಂದು ವಿನಂತಿ. ಕವನ ಚೆನ್ನಾಗಿತ್ತು.

    ReplyDelete
  8. just jirunde mele estu sudaravgi barediddar madam.. super...

    ReplyDelete
  9. ಹೊಸದೇ ವಿಷಯವಸ್ತು ಬಳಸಿ ಹೆಣೆದ ಕವನವಿದು.. ಚೆನ್ನಾಗಿದು..

    ReplyDelete
  10. ನಿಮ್ಮ ಕವನಗಳ ಫ್ಯಾನ್ ಆಗಿದ್ದೇನೆ ಮೇಡಂ.
    ತುಂಬಾ ಚೆನ್ನಾಗಿ ಬರೆಯುತ್ತೀರಿ. ಮಗುವಿಗೆ... ಕವನ ಇಷ್ವವಾಯಿತು.
    ಧನ್ಯವಾದಗಳು.

    ReplyDelete
  11. @ ಕಲಾವತಿಯವರೇ,
    ಕವನದ ಒಳ ನೋಟವನ್ನು ಅರ್ಥೈಸಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ದೂರದಲ್ಲಿರುವ ನೀವು ಬ್ಲಾಗ್ ಮೂಲಕ ಸ೦ಪರ್ಕಕ್ಕೆ ಬ೦ದದ್ದಕ್ಕಾಗಿ ಬಹಳ ಸ೦ತಸವೆನಿಸಿದೆ.

    ReplyDelete
  12. @ ಸುನಾಥ್ ರವರೆ,
    @ ಸಾನ್ವಿಯ ತ೦ದೆಯವರೆ,
    @ ನಾಗರಾಜ್ ಕೆ. ರವರೆ,
    ನನ್ನ 'ಅತಿಕ್ರಮಣ'ವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  13. @ ಮನಸುರವರೆ,
    @ ಸವಿಗನಸುರವರೆ,
    ನನ್ನ ಕವನವನ್ನು ಓದಿ ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  14. @ ಡಾ. ಕೃಷ್ಣಮೂರ್ತಿಯವರೆ,
    ನನ್ನ 'ಅತಿಕ್ರಮಣ'ವನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  15. @ ಸುಬ್ರಹ್ಮಣ್ಯರವರೆ,
    ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಬ೦ದು ನನ್ನ ಕವನಕ್ಕೆ ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಹಳೆಯ ಸರಕು ನನ್ನಲ್ಲಿ ಸಾಕಷ್ಟಿವೆ! ನೀವು ಓದಲು ಆಸಕ್ತಿ ಇದೆ ಎ೦ದು ತಿಳಿಸಿದ್ದರಿ೦ದ ಬಹಳ ಹರ್ಷಿತಳಾಗಿದ್ದೇನೆ.

    ReplyDelete
  16. @ ಮನಮುಕ್ತಾರವರೆ,
    ನನ್ನ ಕವನವನ್ನು ಇಷ್ಟಪಟ್ಟು ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  17. ಜೀವನದ ತುಡಿತ -ಮಾರ್ಮಿಕವಾಗಿ ಜೀರುಂಡೆ ಪ್ರಸಂಗದಲ್ಲಿ ತುಂಬು ಲಾಸ್ಯವಾಗಿ ಹೊಮ್ಮಿದೆ.

    ReplyDelete
  18. @ ಗುಬ್ಬಿ ಸತೀಶ್ ರವರೆ,
    ನಿಮ್ಮ ಅಭಿಮಾನಕ್ಕಾಗಿ ಧನ್ಯವಾದಗಳು. ನನ್ನ ಕವನದ ಒಳ ಭಾವವನ್ನು ಅರ್ಥಮಾಡಿಕೊ೦ಡು ಸ್ಪ೦ದಿಸಿ ಪ್ರತಿಕ್ರಿಯಿಸಿದ್ದರಿ೦ದ ಸ೦ತಸವೆನಿಸಿದೆ.

    ReplyDelete
  19. @ ಸೀತಾರಾಂ ರವರೆ,
    ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಬ೦ದು ನನ್ನ ಕವನಕ್ಕೆ ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಬಹಳ ಹರ್ಷಿತಳಾಗಿದ್ದೇನೆ. ಧನ್ಯವಾದಗಳು, ಬರುತ್ತಿರಿ.

    ReplyDelete