Saturday, November 6, 2010

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು
ದೀಪಾವಳಿಯ ಪ್ರಯುಕ್ತ ೨೦೦೧ರಲ್ಲಿ ಪ್ರಕಟವಾದ ನನ್ನ `ಗುಟುಕು' ಹನಿಗವನ ಸ೦ಕಲನದಲ್ಲಿಯ 'ಪ್ರಣತಿ ಹನಿ' ಗಳನ್ನು ನಿಮ್ಮ ಮು೦ದಿಡುತ್ತಿದ್ದೆನೆ.
ಹಣತೆ
ನನಗಿಲ್ಲ ಹಗಲೊಡೆಯ
ರವಿಗಿರುವ ಘನತೆ
ಆದರೂ
ನಾನಾಗಿರುವೆ
ಪುಟ್ಟ ಹಣತೆ!

ಬಹು-ಮಾನ
ಪ್ರಣತಿಗೆ ಬೇಕಿಲ್ಲ
ಯಾವುದೇ ಬಹುಮಾನ
ಪ್ರಶಸ್ತಿ
ಪ್ರೀತಿ ಅಭಿಮಾನಗಳೇ
ಬಹುದೊಡ್ಡ ಆಸ್ತಿ.

ನಿಖರ
ನಾನಲ್ಲ ದಿನಮಣಿಯ
ದಿವ್ಯ ಪ್ರಭೆಯಷ್ಟು ಪ್ರಖರ
ಆದರೂ
ನಾನಾಗಬಯಸುವೆ
ಸ್ಪಷ್ಟ ನಿಖರ.

ಅಲ್ಪ ಕಾರ್ಯ
ಅತುಲ ಬೈಜಿಕ ಶಕ್ತಿ
ಫಲಶ್ರುತಿಯೇ ಸೂರ್ಯ
ಅಲ್ಪ ಸ್ನೇಹವ ಹೀರಿ
ಬೆಳಗುವುದೆನ್ನ ಕಾರ್ಯ!

ವಿರೂಪ
ಸೋ೦ಕಲು ನನ್ನ ಕುಡಿ
ಬೆಳಗುವುದು ನ೦ದಾದೀಪ
ಸ್ಪರ್ಶಿಸಿದಾಕ್ಷಣವೇ ಸಿಡಿವ
ಸ್ಪೋಟಕವೇ ವಿರೂಪ.

ಮೃತ್ಯು ಚು೦ಬನ
ಹಣತೆ ಬೆಳಗುವ ಕುಡಿಯ
`ಹೂ'ಎ೦ದು ಭ್ರಮಿಸಿ
ಹೂ ಮುತ್ತ ನೀಡಿತು
ಪತ೦ಗ!

11 comments:

  1. ನಿಮಗೂ ದೀಪಾವಳಿ ಶುಭಾಷಯಗಳು,ಚೆಂದದ ಪ್ರಣತಿ ಹನಿಗಳು.ಕೊನೆಯದು
    "ನಿಲ್ಲು ನಿಲ್ಲೇ ಪತಂಗ ಬೇಡ ಬೇಡ ಬೆಂಕಿಯ ಸಂಗ " ಹಾಡನ್ನು ನೆನೆಪಿಸಿತು

    ReplyDelete
  2. ಒಂದೊಂದು ಪ್ರಣತಿ-ಹನಿಯೂ ವಿಶಿಷ್ಟವಾದ ಬೆಳಕನ್ನು ನೀಡಿದೆ.
    ದೀಪಾವಳಿಯ ಶುಭಾಶಯಗಳು.

    ReplyDelete
  3. ಹನಿಗವನಗಳು ಚೆನ್ನಾಗಿವೆ.ನಿಮಗೂ ದೀಪಾವಳಿಯ ಶುಭಾಶಯಗಳು.

    ReplyDelete
  4. nice one..

    ನನಗಿಲ್ಲ ಹಗಲೊಡೆಯ
    ರವಿಗಿರುವ ಘನತೆ
    ಆದರೂ
    ನಾನಾಗಿರುವೆ
    ಪುಟ್ಟ ಹಣತೆ!

    ee saalu galu hidisitu..

    ReplyDelete
  5. ಚುಟುಕು ಕವನ ಚೆನ್ನಾಗಿದೆ. ನಿಮಗೂ ದೀಪಾವಳಿ ಶುಭಾಶಯಗಳು.

    ReplyDelete
  6. ತುಂಬಾ ಚೆನ್ನಾಗಿವೆ ಮೇಡಂ.

    ReplyDelete
  7. ಸುಂದರ ಕವನ...
    ಸುಂದರ ಶಬ್ಧಗಳಲ್ಲಿ ಭಾವಗಳನ್ನು ಚೆನ್ನಾಗಿ ಬಣ್ಣಿಸಿದ್ದೀರಿ...

    ನಿಮಗೂ ಬೆಳಕಿನ ಹಬ್ಬದ ಶುಭಾಶಯಗಳು...

    ReplyDelete
  8. ನನ್ನ `ಪ್ರಣತಿ ಹನಿ'ಗಳನ್ನು ಮೆಚ್ಚಿ ಪ್ರೋತ್ಸಾಹಕರ ಪ್ರತಿಕ್ರಿಯೆಯನ್ನು ನೀಡಿರುವ ನಾಗರಾಜ್ ಕೆ. ಯವರು, ಸುನಾಥ್ ರವರು, ಮನಮುಕ್ತಾ ರವರು , ಪ್ರದೀಪ್ ರಾವ್ ರವರು , ಗುಬ್ಬಿ ಸತೀಶ್ ರವರು, ಪ್ರಕಾಶ್ ರವರು,ಬಿ.ಸಿ.ಚಂದ್ರು ರವರು ಎಲ್ಲರಿಗೂ ಧನ್ಯವಾದಗಳು. ನಮ್ಮ ಪಿ.ಸಿ.ತೊ೦ದರೆಯಿ೦ದ ತಕ್ಷಣ ಪ್ರತಿಕ್ರಿಯಿಸಲಾಗುತ್ತಿಲ್ಲ, ಕ್ಷಮಿಸಿ.

    ReplyDelete
  9. ಪ್ರಭಾಮಣಿ ಯವರೇ ನಿಮಗೆ ದೀಪಾವಳಿ ಹಬ್ಬದ ಶುಭಾಶಯಗಳು. ಹನಿಗಳು ತುಂಬಾ ಸವಿಯಾಗಿವೆ ಧನ್ಯವಾದಗಳು

    ReplyDelete
  10. ಮನಕ್ಕೆ ಮುದ ನೀಡುವ ಗುಟುಕುಗಳು.

    ReplyDelete
  11. @ ಸೀತಾರಾಂ ರವರೆ,
    `ಗುಟುಕು'ವಿನ `ಪ್ರಣತಿ ಹನಿ' ಗಳನ್ನ ಮೆಚ್ಚಿದ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete