Friday, November 19, 2010

ಮನದ ಅ೦ಗಳದಿ............೧೮.ಪ್ರವಾಸ

`ಜಗತ್ತಿನ ಇತರ ರಾಷ್ಟ್ರಗಳಲ್ಲಿ ಸಮಾಜದ ಯಂತ್ರಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿದುಕೊಳ್ಳಲು ನಮ್ಮ ಯುವ ಜನರು ಪ್ರವಾಸ ಮಾಡಬೇಕಾದ ಅಗತ್ಯವುಂಟು’
*ಸ್ವಾಮಿ ವಿವೇಕಾನಂದರು

ಇದು ಶಾಲಾ ಪ್ರವಾಸವನ್ನು ಕೈಗೊಳ್ಳುವ ಸಮಯ. ಕೆಲವು ಶಾಲೆಗಳಲ್ಲಿ ಈಗಾಗಲೇ ಪ್ರವಾಸಕ್ಕೆ ಹೋಗಿ ಬಂದ ಸಂಭ್ರಮದಲ್ಲಿದಾರೆ. ಎಷ್ಟೋ ಶಾಲೆಗಳಲ್ಲಿ ಪ್ರವಾಸಕ್ಕೆ ಹೊರಡುವ ಸಡಗರದ ವಾತಾವರಣವಿದೆ. ಹೊರಡಲು ಸಿದ್ದರಾದ ಮಕ್ಕಳಲ್ಲಿ ಕಾತುರ, ಕುತೂಹಲಗಳ ನಿರೀಕ್ಷೆಯಿದ್ದರೆ, ತಮ್ಮ ಪೋಷಕರ ಆರ್ಥಿಕ ತೊಂದರೆಯಿಂದ ಹೋಗಲಾಗದ ಮಕ್ಕಳ ಮನಸ್ಸುಗಳಲ್ಲಿ ನಿರಾಸೆ ಮಡುಗಟ್ಟಿದೆ.
ಮೂಲತಃ ಅಲೆಮಾರಿಯಾಗಿದ್ದ ಮಾನವ ಸಾಂಸ್ಕ?ತಿಕ ವಿಕಾಸದ ಹಾದಿಯಲ್ಲಿ ಒಂದೆಡೆ ನೆಲೆಸಿ ಜೀವಿಸಲಾರಂಭಿಸಿದ್ದರೂ ?ಪ್ರವಾಸ?ಮಾಡಬೇಕೆಂಬ ಇಚ್ಛೆಯನ್ನು ತನ್ನಲ್ಲೇ ಪೋಷಿಸುತ್ತಾ ಬಂದಿದ್ದಾನೆ. ಪ್ರಾರಂಭದಲ್ಲಿ ಎಲ್ಲೇ ದೂರ ಪ್ರಯಾಣ ಮಾಡಬೇಕಾದರೂ ತಮ್ಮದೇ ಕಾಲುಗಳನ್ನೋ ಇತರ ಪ್ರಾಣಿಗಳನ್ನೋ ಅವಲಂಭಿಸಬೇಕಾಗಿದ್ದ ಸಂದರ್ಭದಲ್ಲಿದ್ದ ತೊಂದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯ ನಂತರ ಇಲ್ಲವಾಗಿದೆ. ಹಣದ ಬೆಂಬಲವೊಂದಿದ್ದರೆ ದೂರದ ರಾಷ್ಟ್ರಗಳಿಗೆ ಹೋಗಿಬರುವುದೂ ಸರಾಗವೆನಿಸಿದೆ.
ಪ್ರವಾಸ ಏಕೆ ಬೇಕು? ಎನ್ನುವ ಬಗ್ಗೆ ವಿಶ್ವದ ಅನೇಕ ರಾಷ್ತ್ರಗಳಲ್ಲಿ ಸಂಚರಿಸಿ ಬಂದು ಈಗ ಬಿಳಿಗಿರಿರಂಗನ ಬೆಟ್ಟದಲ್ಲಿ `ವಿಶ್ವಶಾಂತಿನಿಕೇತನ?ದಲ್ಲಿ ನೆಲೆಸಿರುವ ಸ್ವಾಮಿ ನಿರ್ಮಲಾನಂದರು ಹೀಗೆ ಹೇಳುತ್ತಾರೆ, ` ಸತ್ಯವನ್ನು ಅನ್ವೇಶಿಸುವುದೇನನ್ನ ಜೀವನದ ಮೊತ್ತಮೊದಲ ಹಾಗೂ ಅತ್ಯಂತ ಮುಖ್ಯವಾದ ಮಹತ್ವಾಕಾಂಕ್ಷೆಯಾಗಿದ್ದರೂ, ಭಾರತ ಹಾಗೂ ವಿದೇಶಗಳಲ್ಲಿ ಪ್ರವಾಸ ಮಾಡಬೇಕೆಂಬ ಮತ್ತು ಎಲ್ಲ ರಾಷ್ರಗಳ ಜನಾಂಗಗಳ ಜನರ ಜೊತೆ ಬೆರೆಯಬೇಕೆಂಬ ಹೆಬ್ಬಯಕೆಯನ್ನು ಚಿಕ್ಕ ಹುಡುಗನಾಗಿದ್ದಾಗಲೇ ನಾನು ಇರಿಸಿಕೊಂಡಿದ್ದೆ. ಇಂಥದೊಂದು ಪ್ರವಾಸ ಕಾರ್ಯಕ್ರಮಕ್ಕೆ ನಾನು ವಿಶೇಷ ಮಹತ್ವವನ್ನೂ ನೀಡಿದ್ದೆ. `ಅಲೆದಾಟದಿಂದಲೇ ಜೇನು ಮಧುಸಂಗ್ರಹ ಮಾಡುತ್ತದೆ.? ಎಂಬ ಅರ್ಥದ ಸಂಸ್ಕ?ತ ಸೂಕ್ತಿಯೊಂದಿದೆ. ನಿಜವಾಗಿ ಹೇಳುವುದಾದರೆ ಜಗತ್ತನ್ನು ತಲ್ಲೀನತೆಯಿಂದ ವೀಕ್ಷಿಸುವವರಿಗೆ ಮಾತ್ರವೇ ಆ ಜಗತ್ತು ಸೇರಿರುತ್ತದೆ. ಹೆಗಲಿಗೆ ಗಂಟುಮೂಟೆಗಳನ್ನು ಏರಿಸಿಕೊಂಡು ಜಗದಗಲ ಸುತ್ತಾಡಿದರೆ ಏನು ಫಲ? ಏನು ಪ್ರಯೋಜನ? ಜಗತ್ ಪ್ರವಾಸ ಮಾಡುವ ಮಂದಿ ಈ ದಿನಗಳಲ್ಲಿ ಎಲ್ಲೆಡೆಯೂ ಇದ್ದಾರೆ. ಈಚೆಗೆ ಇಂಥಾ ಪ್ರವಾಸವು ಹಿಂದೆಂದಿಗಿಂತ ಹೆಚ್ಚು ಸುಲಭವೂ ಸುಗಮವೂ ಆಗಿದೆ. ರಾಜಕಾರಣಿಗಳೂ, ವಾಣಿಜ್ಯೋದ್ಯಮಿಗಳೂ ಎಷ್ಟು ತಿರುಗುವುದಿಲ್ಲ? ಆದರೆ ಇವರ ಪ್ರವಾಸ ಸ್ವಾರ್ಥಮೂಲವಾಗಿರುವುದರಿಂದ ಪ್ರವಾಸದ ಪರಿಣಾಮವಾಗಿ ಅವರ ವ್ಯಕ್ತಿತ್ವದಲ್ಲಿ ಮೂಲಭೂತವಾದ ಯಾವ ಬದಲಾವಣೆಯೂ ಸಂಭವಿಸುವುದಿಲ್ಲ. ಯಾವುದಾದರೂ ಮಹದೋದ್ದೇಶವನ್ನು ಇರಿಸಿಕೊಂಡು ಸೂಕ್ಷ್ಮ ವೀಕ್ಷಣೆ ಮಾಡುತ್ತಾ ಪ್ರವಾಸ ಮಾಡುವುದು ಪ್ರಯೋಜನಕರ ಮತ್ತು ಅಪೇಕ್ಷಣೀಯ. ಇಂಥ ಪ್ರವಾಸಗಳಿಂದ ವಿಶ್ವವಿದ್ಯಾನಿಲಯದ ಶಿಕ್ಷಣಕ್ಕಿಂತಲೂ ಮಿಗಿಲಾದ ಉಪಯೋಗವುಂಟು. ಇಂಥಾ ಪ್ರವಾಸ ವ್ಯಕ್ತಿಯ ಅನುಭವವನ್ನು ಶ್ರೀಮಂತಗೊಳಿಸುತ್ತದೆ; ಅವನ ದೃಷ್ಟಿಯನ್ನು ವಿಶಾಲಗೊಳಿಸುತ್ತದೆ.?
ಸತ್ಯಾನ್ವೇಷಣೆಯ ಘನ ಉದ್ದೇಶವನ್ನು ಇರಿಸಿಕೊಂಡು ಸ್ವಾಮಿ ನಿರ್ಮಲಾನಂದರು (ಜನನ ಡಿಸೆಂಬರ್೨, ೧೯೨೪) ೧೯೫೭ರಲ್ಲಿ ಭಾರತ ಪ್ರವಾಸವನ್ನು ಕೈಗೊಂಡರು. ಭಾರತದಲ್ಲಿ ಸುಮಾರು ಹದಿನೈದು ಸಾವಿರ ಮೈಲುಗಳಷ್ಟು ವಿಸ್ತಾರವಾಗಿ ದಿಬ್ರುಗಡದಿಂದ ಡಾರ್ಜಲಿಂಗ್ವರೆಗಿನ; ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಅನೇಕ ಆಶ್ರಮಗಳನ್ನು ಸಂದರ್ಶಿಸಿ ಅಲ್ಲಿ ತಾವು ಭೇಟಿಯಾದ ಅನೇಕ ಆಧ್ಯಾತ್ಮಿಕ ಗುರುಗಳಿಂದ ಸಲಹೆ-ಸೂಚನೆ-ಸಹಾಯ-ಮಾರ್ಗದರ್ಶನ ಪಡೆದರು. ೧೯೫೯ರಿಂದ ೧೯೬೪ರವರೆಗೆ ಸುಮಾರು ನಾಲ್ಕೂವರೆ ವರ್ಷಗಳ ಕಾಲದ ದೀರ್ಘ ವಿದೇಶ ಪ್ರವಾಸವನ್ನು ಮಾಡಿದರು. ಮೊದಲು ಭೂಮಾರ್ಗವಾಗಿ ಯೂರೋಪಿಗೆ ತೆರಳಿ ಅಲ್ಲಿಂದ ಮಧ್ಯಪ್ರಾಚ್ಯ ರಾಷ್ರಗಳಿಗೆಹೋಗಿ ಅನಂತರದ ಹತ್ತು ತಿಂಗಳ ಅವಧಿಯಲ್ಲಿ ಇಸ್ರೇಲನ್ನೂ ಪುಣ್ಯಭೂಮಿ ಪ್ಯಾಲಸ್ಟೈನಿನ ಎಲ್ಲಾ ಪವಿತ್ರ ಸ್ಥಳಗಳನ್ನೂ ಸಂದರ್ಶಿಸಿದರು.ತುರ್ಕಿ, ಗ್ರೀಸ್, ಫ್ರಾನ್ಸ್, ಬೆಲ್ಜಿಯಂ, ಹಾಲೆಂಡ್ಗಳಿಗೆ ಹೋದರು.
ಆಮ್ಸ್ಟರ್ಡಮ್ನಲ್ಲಿದ್ದಾಗ ಅವರಿಗೆ ಒಂದು ಅಪೂರ್ವ ಆಧ್ಯಾತ್ಮಿಕ ಅನುಭವವುಂಟಾಯಿತು. ಅದರ ಪರಿಣಾಮದಿಂದ ಪ್ರವಾಸದ ಗುರಿ ಬೇರೆಯೇ ಆಯಿತು. ಅವರೇ ಹೇಳುವಂತೆ ಇನ್ನಾರೋ ಹೇಳಿದ್ದನ್ನು ಗಿಳಿಪಾಠದಂತೆ ಪುನರುಚ್ಛರಿಸದೇ ತಮ್ಮ ಸ್ವಂತ ಅನುಭವದ ಆಧಾರದ ಮೇಲೆ ಮಾತನಾಡಲು ಅವರು ಸಮರ್ಥರಾಗಿದ್ದರು. ಲೋಕಸಂಚಾರವನ್ನು ಮುಂದುವರೆಸಿ ವಿಶ್ವಾದ್ಯಂತ ಮತ್ತೆಮತ್ತೆ ಸಂಚರಿಸಿದರು.
ಹೀಗೆ ವಿಶ್ವದ ವಿವಿಧ ಭಾಗಗಳಲ್ಲಿನ ಅನೇಕ ಜನರೊಂದಿಗೆ ಉಂಟಾದ ಸ್ನೇಹಸಂಪರ್ಕ ಮತ್ತು ದೀರ್ಘ, ನಿರಂತರ ಹಾಗೂ ದುರ್ಗಮ ಪ್ರವಾಸ- ಇವುಗಳು ತಮ್ಮ ಒಳನೋಟವನ್ನೂ ಜೀವನಾನುಭವವನ್ನೂ ವಿಸ್ತರಿಸಿದವು, ಶ್ರೀಮಂತಗೊಳಿಸಿದುವು ಎನ್ನುತ್ತಾರೆ ಸ್ವಾಮೀಜಿ. ಒಟ್ಟಿನಲ್ಲಿ ಪುಸ್ತಕಗಳಿಂದ ಕಲಿತದ್ದಕ್ಕಿಂತ ಪ್ರವಾಸಗಳಿಂದ ಕಲಿತದ್ದೇ ಹೆಚ್ಚು ಎನ್ನುವುದು ಅವರ ಅಭಿಪ್ರಾಯವಾಗಿದೆ.
ಮಹಾ ಪಂಡಿತ ರಾಹುಲ ಸಾಂಕೃತ್ಯಾನಂದರು ನಿರಂತರ ಯಾತ್ರಿಕರಾಗಿದ್ದರು. ಯಾವುದೇ ಗಟ್ಟಿ ಆರ್ಥಿಕ ಬಲವಿಲ್ಲದಿದ್ದರೂ, ಸರ್ಕಾರಗಳ ಸಹಕಾರವಿಲ್ಲದಿದ್ದರೂ ಟಿಬೆಟಿಗೆ ಮೂರು ಭಾರಿ ಭೇಟಿನೀಡಿ ಅಪೂರ್ವವಾದ ಸಂಸ್ಕ?ತ ಗ್ರಂಥಗಳನ್ನು ಭಾರತಕ್ಕೆ ತಂದರು. ಶ್ರೀಲಂಕಾಗೆ ಹೋಗಿ ಬೌದ್ಧಮತದ ಅಧ್ಯಯನ ನಡೆಸಿದರು. ಸುದೀರ್ಘವಾದ ಏಶ್ಯಾ ಮಹಾಯಾತ್ರೆಯನ್ನು ಕೈಗೊಂಡರು. ರಂಗೂನ್, ಪೆನಾಂಗ್, ಸಿಂಗಾಪುರ, ಹಾಂಗ್ಕಾಂಗ್, ಜಪಾನ್, ಕೊರಿಯಾ, ಮಂಚೂರಿಯಾ........ಮುಂತಾದ ಪ್ರಮುಖ ಸ್ಥಳಗಳನ್ನು ಸಂದರ್ಶಿಸಿ ಆಯಾ ಪ್ರದೇಶಗಳ ಭಾಷೆ, ಸಂಸ್ಕ?ತಿ, ಜನಜೀವನವನ್ನು ಕುತೂಹಲದಿಂದ ಗಮನಿಸುತ್ತಾ ಅಧ್ಯಯನ ಮಾಡುತ್ತಾ ಬರವಣಿಗೆ ಕಾರ್ಯವನ್ನು ಮುಂದುವರಿಸಿದರು.
ಮಹಾನ್ ಸಂತರು, ಜ್ಞಾನಾಕಾಂಕ್ಷಿಗಳು, ಲೇಖಕರು...ಮುಂತಾದವರು ಪ್ರವಾಸವನ್ನು ಮಾಡಿ ತಮ್ಮ ಅನುಭವವನ್ನು ಪ್ರವಚನ ಅಥವಾ ಲೇಖನದ ಮೂಲಕ ಎಲ್ಲರಿಗೂ ತಲುಪಿಸುವ ಪ್ರಯತ್ನ ನಡೆಸಿ ನಮ್ಮ ಅರಿವಿನ ಜಗತ್ತನ್ನು ವಿಸ್ತಾರಗೊಳಿಸಿದ್ದಾರೆ. ಪ್ರವಾಸ ಸಾಹಿತ್ಯಗಳು ಈ ದೃಷ್ಟಿಯಿಂದ ಬಹಳ ಅಮೂಲ್ಯವೆನಿಸುತ್ತವೆ. ಎಲ್ಲರಿಗೂ ಪ್ರಪಂಚದ ಮೂಲೆ ಮೂಲೆಗಳನ್ನು ಸುತ್ತಿ ಬರುವುದು ಅಶಕ್ಯವಾಗಿರುವುದರಿಂದ ಸುತ್ತಿ ಬಂದವರ ಅನುಭವವನ್ನು ಓದಿಯಾದರೂ ಕಲ್ಪನಾ ಪ್ರವಾಸವನ್ನು ಕೈಗೊಳ್ಳಬಹುದು. ಅಥವಾ..... ಅರಿವಿನ ಉನ್ನತ ಸ್ತರಗಳನ್ನು ಏರಬಲ್ಲವರಾದರೆ, ` ` THE BEST JOURNEY IS THE INWARD JOURNEY’ಎನ್ನುವುದರ ಅರ್ಥವರಿತು ಬದುಕನ್ನು ಸಾರ್ಥಕಗೊಳಿಸಿಕೊಳ್ಳಬಹುದು.

8 comments:

  1. Educative article sir. I know this place in B.R. Hills. I an eager to meet Swami Nirmalananda next time while my visit to there.
    My blog:
    www.badari-poems.blogspot.com

    ReplyDelete
  2. ದೇಶ ಸುತ್ತು ಕೋಶ ಓದು..ಎಷ್ಟೊಂದು ಸತ್ಯ.
    ಸಂಚಾರದ ಮಹತ್ವ ಮತ್ತು ಆಶಯ ನಿಮ್ಮ ಲೇಖನದಲ್ಲಿ ಅಡಕವಾಗಿದೆ

    ReplyDelete
  3. ‘ದೇಶ ಸುತ್ತು, ಕೋಶ ಓದು’ ಎನ್ನುವ ಗಾದೆ ಮಾತಿನ ಅರ್ಥ ಇದೇ ಆಗಿದೆ,ಅಲ್ಲವೆ?
    ತುಂಬ ಉಪಯುಕ್ತ ಲೇಖನ.

    ReplyDelete
  4. ಗೆಳತಿ ಪ್ರಭಾಮಣಿ ಯವರೇ ಪ್ರವಾಸದ ಮಹತ್ವ ಕುರಿತಾದ ಲೇಖನ ತುಂಬಾ ಚೆನ್ನಾಗಿದೆ.ಆದ್ರೆ ನಾನು ನನ್ನ ಪ್ರವಾಸ ಕಥನ ಹೇಗೆ ಪ್ರಾರಂಭ ಮಾಡ್ಬೇಕು ಅನ್ನೋದೇ ತಿಳಿತಿಲ್ಲ.ಬಹುಷಃ ನಿಮ್ಮಲೇಖನದ ಪ್ರೇರಣೆ ಏನಾದ್ರೂ ಸ್ಫೂರ್ತಿ ಅಗತ್ತ ,ಪ್ರಯತ್ನ ಮಾಡ್ತೇನೆ.ವಂದನೆಗಳು

    ReplyDelete
  5. @ ಬದರಿನಾಥ್ ರವರೆ,
    @ ಸುನಾಥ್ ರವರೆ,
    @ ಸಾನ್ವಿಯ ತ೦ದೆಯವರೆ,
    @ ಗೆಳತಿ ಕಲಾವತಿಯವರೇ,
    ಪ್ರತಿಕ್ರಿಯಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ನಮ್ಮ ಪಿ. ಸಿ. ತೊ೦ದರೆಯಿ೦ದ ಪ್ರತ್ಯೇಕವಾಗಿ ಪ್ರತಿಕ್ರಿಯಿಸಲಾಗುತ್ತಿಲ್ಲ ಕ್ಷಮಿಸಿ. ಬರುತ್ತಿರಿ.

    ReplyDelete
  6. ಮೇಡಂ ನಂಗೆ ಮತ್ತೆ ಸ್ಕೂಲಿಗೆ ಸೇರ್ಕೋಬೇಕು ಅನ್ನಿಸ್ತಿದೆ. ವಿದ್ಯಾರ್ಥಿಯಾಗಿ ಅಲ್ಲ ಶಿಕ್ಷಕನಾಗಿ. ನಾನು ಮೊದಲು ಶಿಕ್ಷಕನಾಗಿದ್ದವನು. ಥ್ಯಾಂಕ್ಸ್.

    ReplyDelete
  7. @ ಗುಬ್ಬಿ ಸತೀಶ್ ರವರೆ,
    ನಿಮಗೆ ಏಕೆ ಹಾಗೆ ಅನ್ನಿಸಿತೋ ಗೊತ್ತಾಗ್ತಾ ಇಲ್ಲ! ಏನೇ ಇರಲಿ ನಾವು ಯಾವಾಗಲೂ ಬದುಕಿನ ವಿದ್ಯಾರ್ಥಿಗಳೇ ಅಲ್ಲವೇ? ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

    ReplyDelete
  8. ತುಂಬಾ ದಿನದಿಂದ ನಿಮ್ಮ ಲೇಖನ ಓದಿರಲಿಲ್ಲ ಈ ಲೇಖನ ತುಂಬಾ ಚೆನ್ನಾಗಿ ಮೂಡಿದೆ.ನನ್ನ ಕಾಡಿನ ಕಥೆ ಸರಣಿ ಮುಗಿದ ಮೇಲೆ ಮಕ್ಕಳ ಶಾಲಾ ಪ್ರವಾಸದ ಬಗ್ಗೆ ಬರೆಯುತ್ತೇನೆ ನಿಮ್ಮ ಬರವಣಿಗೆ ಚೆನ್ನಾಗಿದೆ ನಿಮಗೆ ಧನ್ಯವಾದಗಳು.

    --
    ಪ್ರೀತಿಯಿಂದ ನಿಮ್ಮವ ಬಾಲು.

    ReplyDelete