Saturday, February 19, 2011

ಸ್ವಯಂ 'ಪ್ರಭೆ'

ಎಂದೋ ಹಚ್ಚಿದ
ಧೂಮ ಹೆಚ್ಚಿದ
ಕಿಲುಬು ಗಟ್ಟಿದ
ಮಬ್ಬು ಬೆಳಕಲಿ
ತಬ್ಬಿಬ್ಬು

ಮುಂದಾಳು ಯಾರೋ
ಎಂದರಿಯದೆ
ಅಂಧಾನುಕರಣೆಯಲಿ
ಬೆಳೆದ ಸಾಲಿನ
ಭಾಗವಾಗಿ
ಸಾಗುತ್ತಿರುವುದು
'ಗತಾನು ಗತಿಕೋ.....'
ಎಂಬ ಉಕ್ತಿಯ
ಸಾರ್ಥಕಗೊಳಿಸಲೆಂದೆ?

ಏಕೋ
ಅರ್ಥಗಳ
ಅನರ್ಥವಾಗಿಸುತಿಹ
ಈ ಎರವಲು
ಮಂಕು 'ಪ್ರಭೆ'ಗಿಂತ
ಶುದ್ಧ, ಸ್ವಚ್ಛ
ಸ್ವಯಂ'ಪ್ರಭೆ'ಯ
ಕುಡಿ ಬೆಳಕಾದರೂ
ಸಾಕೆನಿಸುತಿದೆ
ಮಾರ್ಗ
ಸ್ಪಷ್ಟವೆನಿಸಲು!

14 comments:

  1. ಅತ್ಯುತ್ತಮ ವಿಚಾರದ ಕಿರುಕವನ. ನಮ್ಮ ಕುಡಿದೀಪದ ಬೆಳಕೇ ನಮ್ಮ ಹಾದಿಗೆ ಬೇಕು ಎನ್ನುವ ನಿಮ್ಮ ವಿಚಾರ ಸ್ತುತ್ಯವಾಗಿದೆ.

    ReplyDelete
  2. ಕ್ಷಮಿಸಿ ಪ್ರಭಾಮಣಿಯವರೆ, ಪ್ರಯತ್ನ ಪಟ್ಟೆ ಆದರೆ ನನ್ನ ಪೆದ್ದು ತಲೆಗೆ ಎಟುಕಲಿಲ್ಲ ಈ ಕವನದ ಅರ್ಥ. ನೀವೇ ಒಮ್ಮೆ ವಿವರಿಸಿಬಿಡುವ ಹಾಗಿದ್ದರೆ ಚೆನ್ನಾಗಿರುತ್ತಿತ್ತು.

    ReplyDelete
  3. ತುಂಬಾ ಒಳಾರ್ಥಗಳಿರುವ ಹೊರಗೆ ಮಾತ್ರ ಸರಳತೆ ಬಿಂಬಿಸುವ ಕವನ. ಮೇಡಂ ನಿಮ್ಮ ಕವನಗಳ ಸುಂದರತೆ ಅದನ್ನು ಮತ್ತಷ್ಟು ಕಾಂತಿಯುಕ್ತವಾಗಿಸುತ್ತದೆ.

    ReplyDelete
  4. maarga spashtakke.. swayam prabheya kudibelaku.. e koneya saalugaLu tumbaa hidisidavu..

    ReplyDelete
  5. arthagarbhitavaagide manamukta mdm. 'ಗತಾನು ಗತಿಕೋ.....' expand madi artha tilisteera..nanage catch aglilla..

    ananth

    ReplyDelete
  6. ಪ್ರದೀಪರಂತೆ ನಾನು ಕೂಡ..

    ReplyDelete
  7. Nice one.. bereyavara hangina belakeke beku .. avara hinde naveke hogabeku.. swabhimana hechchisuva kavite...

    ReplyDelete
  8. howdu prabhaamani yavare,kudibelakaadaru, svayam prabheye saarthakate,santrupti.arthagarbhitavaada kavana.ellarante nanaguu "gataanu gatiko"....?

    ReplyDelete
  9. Prabhamani avre,

    arthagarbhita kavana, Ananth sir helidante nanagu ಗತಾನು ಗತಿಕೋ.....idra purnartha gottagilla..

    ReplyDelete
  10. A very nice and true thought madam. here, i just tried to expand this::when we look at the world "God is Dead - Nietzsche" means "Namage Naave Daapavagabeku" which is said by great personalities in the world.(many before to Nietzsche also) after all 'Motivation from others can only start, ultimately individual is responsible for keep it moving'. every one having Halo intrinsically. Thank you.

    ReplyDelete
  11. chennagide....very meaningfull...read so mamy times to understand

    ReplyDelete
  12. ನನ್ನ `ಸ್ವಯ೦ ಪ್ರಭೆ'ಗೆ ಉತ್ತಮ ರೀತಿಯಲ್ಲಿ ಸ್ಪ೦ದಿಸಿ ಪ್ರತಿಕ್ರಿಯಿಸಿದ ಎಲ್ಲ್ಲಾ ಅತ್ಮೀಯರಿಗೂ ಅನೇಕಾನೇಕ ಧನ್ಯವಾದಗಳು. ನನ್ನ ಪ್ರತಿಕ್ರಿಯೆ ತಡವಾಗಿದ್ದಕ್ಕೆ ಕ್ಷಮೆಯಿರಲಿ. `ಗತಾನು ಗತಿಕೋ' ಎನ್ನುವುದರ ಬಗ್ಗೆ `ಮನದ ಅ೦ಗಳದಿ...........೩೧. ಗತಾನು ಗತಿಕೋ ಲೋಕಃ.........' ಲೇಖನ ಬರೆದಿದ್ದೇನೆ. ದಯಮಾಡಿ ಗಮನಿಸಿ ನಿಮ್ಮ ಅಮೂಲ್ಯ ಪ್ರತಿಕ್ರಿಯೆಯನ್ನು ನೀಡಿರಿ. ಭೇಟಿ ನೀಡುತ್ತಿರಿ

    ReplyDelete