Friday, April 29, 2011

ಹನಿ HONEY ಹಾಸ್ಯ

‘ಕಸ್ತೂರಿ' ವಾಹಿನಿಯಲ್ಲಿ ‘`ಹನಿ HONEY ಹಾಸ್ಯ' ಕಾರ್ಯಕ್ರಮಕ್ಕಾಗಿ ಸಿದ್ಧಪಡಿಸಿದ್ದ ಹನಿಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಬೇರೆಬೇರೆ ಶೀರ್ಷಿಕೆಗಳಡಿಯಲ್ಲಿ ಬರೆಯಲು ತಿಳಿಸಿದ್ದರು. ಈ ಮೊದಲೇ ಬರೆದು ಪ್ರಕಟವಾದವುಗಳೂ ಸೇರಿದಂತೆ ವಿಭಾಗಿಸಿದ್ದೇನೆ.

ಶಾಲಾ ಕಾಲೇಜು:

ಚೆಲ್ಲು- ಸೋಶಿಯಲ್ಲು
ಹುಡುಗಿ
ಎಲ್ಲರೊಡನೆ ಕಲೆತು
ಕುಲು ಕುಲು ನಕ್ಕರೆ
ಬರೀ ಚೆಲ್ಲು ಚೆಲ್ಲು
ಹುಡುಗ
ನಗುನಗುತ್ತಾ ಬೆರೆತು
ಕೈ ಕೊಟ್ಟರೂ
ಬಹಳ ಸೋಶಿಯಲ್ಲು!

ನಲಿ-ಕಲಿ
ಸ್ಲೇಟು ಬಳಪವು ಇಲ್ಲ
ಏಟು ಬೈಗುಳವಿಲ್ಲ
ನಲಿಯುತಲೇ ಶಿಕ್ಷಕರು
ಕಲಿಸುತಿಹರಲ್ಲಾ...
ಆದರೀಗ ಶಾಲೆಗಳಲ್ಲಿ
ಮಕ್ಕಳೇ ಇಲ್ಲ!

ಪ್ರೀತಿ ಪ್ರೇಮ:

ವಾಸ್ತವ
ತನ್ನ ಮನದಳಲನ್ನೆಲ್ಲಾ
ನಿವೇದಿಸಿಕೊಂಡ ಆತ
ಅಂಗಲಾಚಿದ ಪ್ರೇಯಸಿಗೆ
ಇನ್ನಾದರೂ ನನ್ನ ವರಿಸು'
ಛಟ್ಟನೆ ಬಿತ್ತೊಂದು ಕೆನ್ನೆಗೆ
ಚುರು ಚುರು ಎಂದಾಗಲೇ...
ತಿಳಿದದ್ದು
ಅದು ಒಂದು ಕನಸು!

ಅಭಿ-ರುಚಿ
ಆಕೆ ತಿಳಿಯಲಿಚ್ಛಿಸಿದಳು
ಆತನ ಅಭಿರುಚಿ
ಉತ್ಸುಕನಾದ ಆತ
ಹೇಳಲಾರಂಭಿಸಿದ
ಬೂಂದಿ, ಬೋಂಡ, ಬಜಿ
ಒಂದಲ್ಲ ನೂರಾರು...
ತರತರದ ರುಚಿ
ಪಟ್ಟಿ ಮುಗಿವ ವೇಳೆಗೆ
ಬುದ್ಧಿ ಹೇಳಿದ್ದಳವಳು ಕಾಲಿಗೆ!


ದಾಂಪತ್ಯ:

ನೋಟ
ಪ್ರಿಯಾ
ಸಾಕಿನ್ನು ನಿನ್ನ
ಪ್ರೇಮ ಪೂರಿತ
ಆರಾಧನಾ ನೋಟ
ತಿಂಗಳಿಗೊಮ್ಮೆಯಾದರೂ
ಕೊಡು
ಕೈತುಂಬ ನಿನ್ನ
ಸಂಬಳದ ನೋಟ!

ಲೇ-LOW
ಪತಿ ಪತ್ನಿಯನ್ನು
`ಲೇ' ಎನ್ನುತ್ತಾನೆ,
ಪತ್ನಿ ಪತಿಯನ್ನೇಕೆ
`ಲೋ' ಎನ್ನುವುದಿಲ್ಲ?
ಏಕೆಂದರೆ
ಆಕೆ ಅಷ್ಟು
LOW ಅಲ್ಲ!

ಸ್ಪರ್ಧೆ
ಅವಳು ಗಂಡನಲ್ಲಿ
ಬೇಡಿಕೆ ಇಟ್ಟಳು
ಅಮೇರಿಕನ್ ಡೈಮಂಡ್ ಓಲೆಗೆ
ಆತ ಹಣಕೂಡಿಸಿ
ಓಲೆ ಮಾಡಿಸುವ ವೇಳೆಗೆ
ಅವಳ ಕಿವಿಯ ಮೇಲಿನ
ಕೂದಲೆಲ್ಲಾ ತುತ್ತಾಗಿತ್ತು
ಬಿಳಿ ನೆರೆಯ ಧಾಳಿಗೆ
ಓಲೆ ಹಾಕಿಕೊಂಡಾಗ.....
ಹರಳಿನ ಹೊಳಪು
ಕೇಶದ ಬಿಳುಪು
ಇಳಿದಿದ್ದವು ಸ್ಪರ್ಧೆಗೆ!

ರಾಜಕೀಯ

ಪಕ್ಷಾಂತರಿ
ರೆಂಬೆಯಿಂದ ರೆಂಬೆಗೆ
ಹಾರುವ ಮಂಗವೇ
ಏಕೆ ಕೂರುವುದಿಲ್ಲ
ಒಂದೆಡೆ ಸ್ಥಿರವಾಗಿ?
ರೆಂಬೆಗಳೆಲ್ಲಾ ಟೊಳ್ಳು ಅಭದ್ರ
ಹುಡುಕುತಿರುವೆ ಗಟ್ಟಿ
ನೆಲೆಗಾಗಿ!

ಸು(Some)ರಂಗ
ಮಾರ್ಗ ಸುಗಮವಾಗಲು
ತೋಡುತ್ತಾರೆ
ಸುರಂಗ
ಆಡಳಿತ ತಮ್ಮದಾಗಿಸಿಕೊಳ್ಳಲು
ಹೂಡುತ್ತಾರೆ
Someರಂಗ!

ಜನ ನಾಯಕರು
ಜನರನ್ನು ಓಲೈಸಿ
ಪಡೆಯುವರು ಓಟು
ಚೆಲ್ಲಿ ಎಲ್ಲೆಂದರಲ್ಲಿ
ಯಥೇಚ್ಛ ನೋಟು
ನೀಡುವರು ಏನೆಲ್ಲಾ
ತುಂಬು ಆಶ್ವಾಸನೆ
ಗೆದ್ದ ನಂತರ
ಸಾಗುವರು
ಕಂಡರೂ ಕಾಣದಂತೆ
ಸುಮ್ಮನೆ!

ನನ್ನ ಮೆಚ್ಚಿನ ಸ್ವರಚಿತ ಹನಿಗವನ:

ಲಕ್ಷ್ಮಣ ರೇಖೆ
ಅಂದು ಆ ರೇಖೆ ದಾಟಿ
ಪಜೀತಿ ಪಟ್ಟಳು
ತರಳೆ
ಇಂದು
ಈ ರೇಖೆ ದಾಟಿಯೂ
ಜೀವ ಉಳಿಸಿಕೊಳ್ಳುತಿವೆ
ಜಿರಲೆ!

(ಎಪ್ರಿಲ್ ಪ್ರಾರ೦ಭದಲ್ಲೆ ಹಾಕಬೇಕೆ೦ದಿದ್ದೆ . ಅಂತ್ಯದಲ್ಲಾದರೂ ಆಯಿತಲ್ಲಾ ಎನ್ನುವುದೇ ಸ೦ತಸ.
`ಹನಿ'ಗಳು ನಿಮ್ಮೆದುರಿವೆ.`ಹಾಸ್ಯ'ಕ್ಕಾಗಿ ಶೋಧಿಸಿ ಪ್ರತಿಕ್ರಿಯಿಸಿ!)

13 comments:

 1. Chennaagive..
  'Low' hani nammannu 'le'vadi madi 'low' maduvantide..  BANNI: http://manasinamane.blogspot.com/

  ReplyDelete
 2. ಚೆ೦ದದ ಹನಿಗಳಲ್ಲಿ ಹಾಸ್ಯದ ಸವಿ...!very nice.

  ReplyDelete
 3. ಪ್ರಭಾಮಣಿಯವರೆ,
  ವಿನೋದದ ಹನಿಗಳು, honeyಯಂತೆ ಸೊಗಸಾಗಿವೆ. ಇನ್ನಿಷ್ಟು ಇಂತಹ ಹನಿಗಳನ್ನು ಕೊಡಲು ನಿಮ್ಮಲ್ಲಿ ಕೋರುತ್ತೇನೆ.

  ReplyDelete
 4. Honey ಕವನಗಳು ..... , ಹಂಚಿದಕ್ಕೆ. ನನ್ನ ನಮನಗಳು......
  ಲಕ್ಷ್ಮಣ ರೇಖೆ WORK ಆಗಿಲ್ಲ ಅಂದ್ರೆ .. ಕಪ್ಪು ಮತ್ತು ಕೆಂಪು HIT ಉಪಯೋಗಿಸಿರಿ.. :)

  ReplyDelete
 5. ಪ್ರಭಾಮಣಿ ಮೇಡಂ ನಿಮ್ಮ ಜೇನಿನಂತ ಹನಿ ಗವಿತೆಗಳು ಮುದವಾಗಿವೆ,ಇನ್ನಷ್ಟು ಬತ್ತಳಿಕೆಯಿಂದ ಹೊರಬರಲಿ.

  ReplyDelete
 6. Madam,
  Ella hani kavanagalu super super…
  It was my luck that I was one of the cameraman at Kasturi Tv shooting of Hani Hani Hasya.

  ReplyDelete
 7. ಎಪ್ರಿಲ್ ಅ೦ತ್ಯಕ್ಕೆ ಹ೦ಚಿಕೊ೦ಡ ನನ್ನ `ಹನಿ'ಗಳಲ್ಲಿನ `ಹಾಸ್ಯ'ವನ್ನು ಗುರುತಿಸಿ ಮೆಚ್ಚಿ `HONEY (!)' ಎ೦ದೂ ಪರಿಗಣಿಸಿ ಉತ್ತಮ ರೀತಿಯ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಿ ಹುರಿದು೦ಬಿಸಿದ ಎಲ್ಲ್ಲಾ ಬ್ಲಾಗ್ ಬ೦ಧುಗಳಿಗೂ ಅನೇಕಾನೇಕ ಧನ್ಯವಾದಗಳು. .ನನ್ನ ಬ್ಲಾಗ್ ಗೆ ಸದಾ ಸ್ವಾಗತ.

  ReplyDelete
 8. ಚೆನ್ನಾಗಿದೆ ಮೇಡಮ್.. ಸ್ಪರ್ಧೆ ಹನಿಗವನ ಬಹಳ ಹಿಡಿಸಿತು.. ಧನ್ಯವಾದಗಳು!

  ReplyDelete
 9. hani gavanagalu thumba chennagive madam

  ReplyDelete