Sunday, May 22, 2011

ಸಂಸ್ಕಾರ

ಆಗಿದೆ
ಶವಸಂಸ್ಕಾರ
ಅಸ್ಥಿ ಸಂಚಯನ
ಆಗಬೇಕಿನ್ನೂ
ಪುಣ್ಯ ತೀರ್ಥಗಳಲ್ಲಿ

ಅಲೆಯುವುದಾಗಿದೆ
ಹೊತ್ತು
ಎಲುಬುಗಳ
ಮಡಕೆಯ
ಶುದ್ಧ ಸಲಿಲವನರಸುತ್ತಾ
[ಹರಿವ ನೀರಿಗೆ
ಮೈಲಿಗೆ ಇಲ್ಲವಂತೆ!]

ಹಿಂದೊಮ್ಮೆ
'ಪವಿತ್ರ ನದಿ'
ಎನಿಸಿದವುಗಳಿಗೂ
ಧರಿಸಲಾಗುತ್ತಿಲ್ಲ
ಸತ್ಯದ ಎಲುಬುಗಳ
ತಮ್ಮೊಳಗೆ

ಅಂತ್ಯವಿಧಿಗಳ
ಪೂರೈಸದೆ
ಇರಲಾದೀತೆ?

ಕುಟ್ಟಿ ಪುಡಿಮಾಡಿ
ಮೂಳೆಗಳ
ಹರಡಿಬಿಟ್ಟರೆ ಹೇಗೆ
ಭುವಿಯ
ಒಡಲೊಳಗೆಲ್ಲಾ?

ಹಿಂದೊಮ್ಮೆ
ಮಣ್ಣುಪಾಲಾದ
ಮಾನವೀಯತೆಯ
ತುಣುಕಾದರೂ
ಅಂಟಿ
ಮೊಳೆಯಬಹುದೇನೊ

ಸಲ್ಲುವಂತಿದ್ದರೆ ಸಾಕು
'ಸಾಪೇಕ್ಷ ಸತ್ಯ'
ಈ ಕಾಲಕ್ಕೆ!

10 comments:

  1. ಚೆಂದದ ಸಾಲುಗಳು...

    ReplyDelete
  2. ಕವನ ಚನ್ನಾಗಿದೆ.ಅರ್ಥ ಮತ್ತು ಅ೦ತರ೦ಗದ ವಿಸ್ತಾರ ವಿಶಾಲವಾಗಿದೆ .

    ReplyDelete
  3. This poem has all essence of real poetry. lines are so effictive on its base. gr8

    ReplyDelete
  4. awesome poem! shows the true picture of life. very nice.

    ReplyDelete
  5. ಚಂದದ ಸಾಲುಗಳ ಸಂಸ್ಕಾರ ...
    ತಿಳಿಸಿದೆ ಹಲವು ವಿಚಾರ .

    ReplyDelete