Friday, July 8, 2011

ಮನದ ಅಂಗಳದಿ.....

ಬೆಳೆ ಇಲ್ಲದ ಜಾಗದಲ್ಲಿ

ಬೆಳೆವುದು ಕಳೆ

ಯಥೇಚ್ಚ

ಪೈರನ್ನೇ ಹಿಮ್ಮೆಟ್ಟಿಸಿ

ಹುಲುಸಾಗುವಲ್ಲೇ

ವಿಕಟಾಟ್ಟಹಾಸ


ಉಳಿವಿಗಾಗಿ

ಪೈಪೋಟಿಯಲ್ಲಿ

ಸಮರ್ಥ ಕಳೆಗೇ

ಉಳಿವು

ಕಳೆಯ ನಿರ್ಮೂಲನೆಗೋ

ಹತ್ತೆಂಟು ಹಾದಿ


ಕಿತ್ತಷ್ಟೂ

ಮತ್ತೆ ಚಿಗುರುವ

ರಕ್ತ ಬೀಜಾಸುರನ

ವಂಶ!

ಬೆಳೆಗೇಕಿಲ್ಲ

ಆ ಒಂದೂ

ಅಂಶ?


ಬೆಳೆಯನೇ

ಬಳಸುವ

ಧೃತರಾಷ್ಟ್ರಾಲಿಂಗನ

ಎತ್ತಲಿಂದಲೋ

ಬಂದವತರಿಸಿದ

ಪಾರ್ತೇನಿಯಂ ಪಯಣ!


ಕಳೆಯ ನಾಶದತ್ತಲೇ

ಕೇಂದ್ರೀಕೃತ ಮನವ

ಬೆಳೆಯ

ಸದೃಢಗೊಳಿಸುವತ್ತ

ಕೊಂಡೊಯ್ದರೆ ಹೇಗೆ?


ಸಮರ್ಥ ಬೆಳೆ

ನಿಂತೀತು

ಕಳೆಯನೇ ಮೆಟ್ಟಿ

ಗೊಬ್ಬರವಾಗಿಸಿಕೊಳ್ಳುತ್ತಾ.....

16 comments:

  1. ಕಿತ್ತಷ್ಟೂ ಮತ್ತೆ ಚಿಗುರುವ ವಂಶ....
    ಬೆಳೆಗೇಕಿಲ್ಲ ಆ ಒಂದೂ ಅಂಶ...?
    ಚೆನ್ನಾಗಿದೆ ಕವನ....

    ReplyDelete
  2. ಪ್ರಭಾ ಮೇಡಂ...ಕಳೆಯೇ ಕಳೆಹೊಂದಿದೆ ಬೆಳೆ ಕಳೆಗುಂದಿದೆ ಇಂದಿನ ಸಮಾಜ ಮತ್ತು ಸುತ್ತಮುತ್ತಲ ಪರಿಸರದಲ್ಲಿ... ಬಹಳ ಸಮಯೋಚಿತ ಮಾತನ್ನು ಕವನಿಸಿದ್ದೀರಿ,,

    ReplyDelete
  3. nija nimma saalugaLu... tumba chennagide thank you

    ReplyDelete
  4. prabhaamaniyavare,paartheniyam naduveye beleyu phalisuvude saadhaneyallave..naanu saha paarteniyamne vastuvaagisiddene.aadare adinnuu apoornavaage ide.aadare nimma kavana arthapoornavaagide.abhinandanegalu.

    ReplyDelete
  5. 'ಮನದ ಅಂಗಳದಿ....'ಕವನವನ್ನು ಮೆಚ್ಚಿ
    ಆತ್ಮೀಯವಾಗಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಬರುತ್ತಿರಿ.

    ReplyDelete
  6. ತುಂಬಾ ಅವಶ್ಯಕ ಸಂದೇಶ...ಕವನ ಚೆನ್ನಾಗಿದೆ.

    ReplyDelete