Friday, July 29, 2011

'ಹನಿ'ಗಳು

ಅಸ್ತಿತ್ವ

ಕತ್ತಲೆಯ

ಅಟ್ಟೋಡಿಸುವ

ಬೆಳಕಿಗೆ

ತನ್ನ ಅಸ್ತಿತ್ವದ ಬಗ್ಗೇ

ಅಪನಂಬಿಕೆ!

ಸೃಜನಶೀಲತೆ

ಸ್ವಪ್ರಕಾಶದ

ಜ್ಯೋತಿಗೆ

ಪರಬೆಳಕಿನ

ಹಂಗಿಲ್ಲ!

ನೆರಳು

ಕತ್ತಲಲ್ಲಿ

ಕುಳಿತಲ್ಲಿ

ಕಾಡುವ

ನೆರಳೆಲ್ಲಿ?

ಶೋಧ

ಹಿಡಿದು

ಬೆಳಕಿನ ಮೂಲ

ಕೈಯಲ್ಲಿ

ಹುಡುಕಿದೆ

ಕತ್ತಲೆಗಾಗಿ

ಮೂಲೆಮೂಲೆಗಳಲ್ಲಿ!


12 comments:

  1. ಪದಗಳ ಆಂತರ್ಯದಲ್ಲೊಂದೊಂದು ಅರ್ಥ, ಚೆನ್ನಾಗಿದೆವೆ,,,,,,

    ReplyDelete
  2. ಅರ್ಥ ಪೂರ್ಣವಾದ ಹನಿಗಳು..

    ReplyDelete
  3. ತುಂಬಾ ಅರ್ಥಪೂರ್ಣ ಹನಿಗಳು.ಅಭಿನಂದನೆಗಳು ಮೇಡಂ.

    ReplyDelete
  4. chikka chikka saalugalalli vishaala artha tumbide! chennaagide!

    ReplyDelete
  5. @ ಪ್ರವರ ರವರೆ,
    @ ಗುರು ರವರೆ,
    @ಪ್ರದೀಪ್ ರವರೆ,
    @ಡಾ. ಕೃಷ್ಣ ಮೂರ್ತಿಯವರೆ,
    @ ರಶ್ಮಿ ಯವರೇ,
    ನನ್ನ 'ಹನಿ'ಗಳು ಅರ್ಥ ಪೂರ್ಣವಾಗಿವೆ ಎ೦ದು ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಬರುತ್ತಿರಿ.

    ReplyDelete
  6. ನವ್ಯದ ಹನಿಗಳು ಹಿಡಿಸಿದವು!

    ReplyDelete
  7. @ವಿ.ಆರ್.ಭಟ್ ರವರೆ,
    ನನ್ನ 'ಹನಿ'ಗಳಿಗೆ ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  8. arthapoornavaada hanigalu prabhaamaniyavare.abhinandanegalu.

    ReplyDelete
  9. ಹನಿಗವನಗಳು ಸೊಗಸಾಗಿವೆ

    ReplyDelete
  10. @ಮ೦ಜುನಾಥ್ ರವರೆ,
    @ಕಲಾವತಿಯವರೇ,
    ನನ್ನ 'ಹನಿ'ಗಳನ್ನು ಇಷ್ಟಪಟ್ಟು, ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  11. ಕತ್ತಲಲ್ಲಿ ಮನದಲ್ಲಿ ಹಾಯುವ ನೆರಳಿಗೆ ಮೂಲವೆಲ್ಲಿ ಹುಡುಕಾಟ ತುಂಬಾ ತೀಕ್ಷ್ಣವಾದ ಚುಟುಕು.

    ReplyDelete