Thursday, August 11, 2011

'ಹನಿ' ಗಳು

ಬಂಧ?

ಕೊಡು ಕೊಳ್ಳುವಿಕೆಯಲಿ

ಅಡಗಿದೆ

ಕೆಳೆತನದ ಮಹತ್ವ

ನನ್ನದೋ ಸಂತೃಪ್ತ

ರಾಜಾನಿಲದ

ಜಡತ್ವ!

ಶೂನ್ಯ

ಕಣ್ತೆರೆದು ನೋಡಿದೆ

ಎಲ್ಲವೂ ನನ್ನದಾಗಿತ್ತು

ಕಣ್ಮುಚ್ಚಿ ಕಂಡೆ

ನಾನೇ ಎಲ್ಲವೂ ಆಗಿ

ಇಲ್ಲವಾಗಿದ್ದೆ!

ಮೌನ

'ನಾನು', 'ನೀನು'

ಸಂಭೋದನೆಗಳಿಂದ

ಭಾವನೆಗಳೇ

ಛಿದ್ರ

ನನ್ನಲ್ಲಿ ನೀನು

ನಿನ್ನಲ್ಲಿ ನಾನಾಗುವ

ಸಂಬಂಧದಿಂದ

ಬದುಕಿನ ಅಡಿಪಾಯ

ಭದ್ರ.

ಅತಿಕ್ರಮಣ

ಅಂಥಾ

ಮಧುರ ಹಾಲಿಗೆ

ತೊಟ್ಟು

ಹುಳಿಬಿತ್ತು

ಎಲ್ಲೆಂದು

ಹುಡುಕುವ ವೇಳೆಗೆ

ಹಾಲೇ

ಹುಳಿಯಾಗಿತ್ತು!

ಎಸೆದ ಕಲ್ಲು

ನೀರ ಮೇಲ್ಮೈಯಲ್ಲಿ

ಅಲೆಗಳೆಬ್ಬಿಸಿದ್ದು

ಆಳಕ್ಕಿಳಿದಂತೆ

ನಿಶ್ಚಲ!

8 comments:

  1. ಅದ್ಭುತ ಚುಟುಕುಗಳು "ಮೌನ" ತುಂಬಾ ಇಷ್ಟವಾಯಿತು ಆದರೆ ಮೌನ ಶೀರ್ಷಿಕೆ ಚುಟುಕಿಗೆ ಹೊಂದಲಿಲ್ಲವೇನೋ? ಎನಿಸಿತು...

    ReplyDelete
  2. ಹನಿಗವನಗಳು ಮನಮುಟ್ಟುವ೦ತಿವೆ. ಶೂನ್ಯ ತು೦ಬಾ ಇಷ್ಟವಾಯಿತು. ಅಭಿನ೦ದನೆಗಳು.

    ಅನ೦ತ್

    ReplyDelete
  3. ಪ್ರಭಾಮಣಿಯವರೆ,
    ಜೇನು‘ಹನಿ’ಗಳನ್ನು ಸವಿದು ಖುಶಿಯಾಯಿತು. ಧನ್ಯವಾದಗಳು.

    ReplyDelete
  4. prabhamaniyavare,ondondu hanigaluu..arthapoornavaagive.
    dhanyavaadagalu.

    ReplyDelete
  5. Prabhamaniyavre,

    Ella chutukugalu superrr...Dhanyavadagalu....

    ReplyDelete
  6. ನಿಮ್ಮ ಬ್ಲಾಗಿಗೆ ಬಂದಾಗಿನಿಂದ ಹೊಸ ಓದಿನ ಅನುಭವ ನೀಡಿದೆ. ಹನಿಗವನಗಳು ಇಷ್ಟವಾದವು

    ReplyDelete