Saturday, October 29, 2011

ಕ೦ಡಷ್ಟೇ ಬೆಳಕೇ?

ಅರಸುವುದಾಗಿದೆ ಬೆಳಕ

ಹಚ್ಚನೆಯ

ಹಗಲುಗಳಲ್ಲಿ

ಬೆಳದಿ೦ಗಳ

ರಾತ್ರಿಗಳಲ್ಲಿ!

ಸೂರ್ಯಾ೦ತರಾಳದ

ಬೈಜಿಕ ಸಮ್ಮಿಳನದೀ

ಫಲವೇ

ಪ್ರತ್ಯಕ್ಷ ಸಾಕ್ಷಿಯಾಗಿದೆ

ಜಗದ ವಿಘಟನೆಗಳಿಗೆಲ್ಲಾ

ಹಾರಿಬಿಟ್ಟ

ಶ್ವೇತ ಕಪೋತದಿ೦ದ

ಬಸಿದ ನೆತ್ತರಹನಿ

ರಕ್ತ ಬೀಜಾಸುರನಾಗಿ

ಬೆಳಕೇಕೋ

ಬೆಳಕೆನಿಸುತ್ತಿಲ್ಲ!

ಹರಿವ ನದಿಯೊಡನೆ

ಹೆಜ್ಜೆ ಇಡಲಾಗದೇ

ದಡಕ್ಕ೦ಟಿದ ಜೀವ

ಬಸವಳಿದು ಮುಚ್ಚಿದ

ಕ೦ಗಳೊಳಗೆ

ಕಣ್ಣಾಮುಚ್ಚಾಲೆಯಾಡುವ

ಬೆಳಕು!

ಕ೦ಡಷ್ಟೇ ಸತ್ಯವಲ್ಲ

ಹಿಡಿಗೆ

ಸಿಲುಕುವುದೂ ಇಲ್ಲ

ಧ್ಯಾನಸ್ಥ ಮನದ

ಮೂಲೆಯಲ್ಲಿ

ಸುಳಿವ

ಕಿರಣ ಗುಚ್ಚ!

16 comments:

  1. ಮೇಡಂ ನೀವು ಕಥನದಲ್ಲಿ ಎಷ್ಟು ಪತುವೋ ಅಷ್ಟೇ ಕಾವ್ಯದಲ್ಲೂ ಪಟು... ಸೂಪರ್!

    ಮೊದಲು ಕಂಡಷ್ಟೇ ಬೆಳಕೇ ಎನ್ನುವ ಶೀರ್ಷಿಕೆಯೇ ಅದ್ಭುತ ಕಲ್ಪನೆ.

    ಮನಸ್ಸಿನ ತೆರೆದುಕೊಳ್ಳಬಲ್ಲ ಒಳ ಕಣ್ಣಿನ ಪರದಿಯಷ್ಟೇ ಒಳ ನುಸುಳುವ ಬೆಳಕಿನ ಮೊತ್ತ.

    ತುಂಬಾ ಇಷ್ಟ ಆಯಿತು.

    ReplyDelete
  2. 'ಧ್ಯಾನಸ್ಥ ಮನದ ಮೂಲೆಯಲ್ಲಿ ಸುಳಿವ ಕಿರಣ ಗುಚ್ಛ'-ಚೆಂದದ ಸಾಲುಗಳು.ಒಳ್ಳೆಯ ಕವನ.ಧನ್ಯವಾದಗಳು ಮೇಡಂ.

    ReplyDelete
  3. ಚೆನ್ನಾಗಿದೆ ಸಾಲುಗಳು. ಮನಸ್ಸನ್ನು ಬೆಳಗುವ ಕಿರಣಗಳೇ ಬೇರೆ ಅಲ್ಲವೇ. ಶೀರ್ಷಿಕೆ ಕೂಡ ಚೆನ್ನಾಗಿದೆ. ಅರ್ಥ ಗರ್ಭಿತವಾಗಿದೆ!!

    ReplyDelete
  4. ಬೆಳಕು.. ಧ್ಯಾನಸ್ಥ ಮನದ ಮೂಲೆಯಲಿ ಕುಳಿತ ಕಿರಣಗುಚ್ಚ...!

    ತು೦ಬಾ ಚೆ೦ದದ ಸಾಲುಗಳು..

    ReplyDelete
  5. @ಬದರಿನಾಥ್ ಪಲವಳ್ಳಿಯವರೇ,
    ಬರೆಯಬೇಕೆನಿಸಿದ್ದನ್ನು ಸ್ವಲ್ಪ ಮನದಲ್ಲಿಯೇ ಮಥಿಸಿ ಬರೆಯುತ್ತೇನೆ ಅಷ್ಟೇ. ಕಲಿಯುವುದು ಬಹಳವಿದೆ. ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  6. @Dr.D.T.ಕೃಷ್ಣಮೂರ್ತಿಯವರೇ,
    ನನ್ನ ಕವನದ ಸಾಲುಗಳ ಅ೦ತರಾರ್ಥವನ್ನು ಮೆಚ್ಚಿ ಪ್ರೋತ್ಸಾಹಕರ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು.

    ReplyDelete
  7. @ಶಿವರಾಮ ಭಟ್ ರವರೆ ,
    ನನ್ನ ಬ್ಲಾಗ್ ಗೆ ಸ್ವಾಗತ. ಕವನದ ಸಾಲುಗಳನ್ನು ಇಷ್ಟಪಟ್ಟು ಪ್ರತಿಕ್ರಿಯೆ ನೀಡಿದ್ದಕ್ಕಾಗಿ ವ೦ದನೆಗಳು. ಬರುತ್ತಿರಿ.

    ReplyDelete
  8. @ನಾಗರಾಜ್ .ಕೆ ರವರೆ ,
    ನಿಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  9. @ಮನಮುಕ್ತಾ ರವರೆ
    ನನ್ನ ಕವನದ ಸಾಲುಗಳನ್ನು ಇಷ್ಟಪಟ್ಟು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ವ೦ದನೆಗಳು.

    ReplyDelete
  10. ಪ್ರಭಾಮಣಿಯವರೆ,
    ಅರ್ಥಗರ್ಭಿತ ಕವನಕ್ಕಾಗಿ ಅಭಿನಂದನೆಗಳು.

    ReplyDelete
  11. kavana tumba channaagide. title tumba ishtavaayitu.

    ReplyDelete
  12. ತುಂಬ ಅರ್ಥ ಪೂರ್ಣವಾಗಿದೆ... Beautiful poem

    ReplyDelete
  13. ನಮಸ್ತೆ, ಪ್ರಭಾಮಣಿ ನಾಗರಾಜರೇ, ನೀವು ಹೇಳುವುದು ಸರಿ.
    ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
    ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
    ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
    ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||
    ನಿಮ್ಮ ಈ ತಾಣದ ವಿನ್ಯಾಸ ಪುನರ್ ರಚನೆ ಮಾಡಿರುವುದು ಚೆನ್ನಾಗಿದೆ.

    ReplyDelete
  14. ಅದ್ಭುತ ಸಾಲುಗಳು..
    ಬೆಳಕು!

    ಕ೦ಡಷ್ಟೇ ಸತ್ಯವಲ್ಲ

    ಹಿಡಿಗೆ

    ಸಿಲುಕುವುದೂ ಇಲ್ಲ

    ಧ್ಯಾನಸ್ಥ ಮನದ

    ಮೂಲೆಯಲ್ಲಿ

    ಸುಳಿವ

    ಕಿರಣ ಗುಚ್ಚ!

    ತುಂಬಾ ಇಷ್ಟವಾಯ್ತು..ಅಭಿನಂದನೆಗಳು..

    ReplyDelete