Saturday, November 12, 2011

ಗೆಳತಿ ಕನ್ನಡತಿ


ನನ್ನ ಗೆಳತಿ ಕನ್ನಡತಿ

ನನ್ನ ಜೀವ ಸಂಗಾತಿ

ತಾಯ ತೊಡೆಯಲಿ

ಹಸುಕೂಸಾಗಿ ಅತ್ತಾಗ

ಲಾಲಿ ಜೋಗುಳ ಹಾಡಿ

ರಮಿಸಿದವಳು

ಅಮ್ಮನ ಪ್ರೀತಿಯ

ಅಮೃತ ಸಿಂಚನವನ್ನು

ಮಮತೆಯ ಮಾತಾಗಿ

ಉಣಿಸಿದವಳು

ಭಾಷೆ ಏನು?

ಬಾಹ್ಯ ಜಗವೇನು?

ಎಂದರಿವ ಮೊದಲೇ

ಜಿಹ್ವೆಯ ಮೇಲೆ

ತೊದಲು ನುಡಿಯಾಗಿ

ನಲಿದವಳು

ಪಕ್ಷಿ ಪ್ರಾಣಿ

ರಾಜ ರಾಣಿಯರ ಕಥೆಯಾಗಿ

ಕನಸು ಕಲ್ಪನೆಗಳನು

ಕೆದಕಿದವಳು

ಅಕ್ಷರದ ಮುತ್ತುಗಳ

ಸಾಲಾಗಿ ನನ ಕೂಗಿ

ಸಾಹಿತ್ಯದತ್ತ

ಸೆಳೆದವಳು

ಇರಲಿ ಇವಳಲ್ಲದೆ

ಹಲವಾರು ಗೆಳತಿಯರು

ಇವಳ ಸಿರಿವಂತಿಕೆಗೆ

ಸಾಟಿಯಾರು?

ಸ್ನೇಹದಲಿ ಇವಳಿಗೇ

ಪ್ರಥಮ ಆದ್ಯತೆ ಸ್ಥಾನ

ಮಿಕ್ಕವರಿಗೂ ಇಹುದು

ತೆರೆದ ಮನ!

(ಬಹಳ ಹಿ೦ದೆಯೆ ಬರೆದ ಈ ಕವನವನ್ನು ಕನ್ನಡ ರಾಜ್ಯೋತ್ಸವದ ದಿನವೇ ಬ್ಲಾಗ್ ಗೆ ಹಾಕಿ ಎಲ್ಲರಿಗೂ ಶುಭಾಶಯಗಳನ್ನು ತಿಳಿಸಬೆಕೆ೦ದಿದ್ದೆ. ಆದರೆ ಕೆಲವು ಅನಿವಾರ್ಯತೆಗಳಿ೦ದ ಪ್ರಮುಖವಾಗಿ ನನ್ನ PC ತೊ೦ದರೆಯಿ೦ದ ಆಗಲಿಲ್ಲ. ಆದ್ದರಿ೦ದ ತಡವಾಗಿ ತಿಳಿಸುತ್ತಿದ್ದೇನೆ, "ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು")

5 comments:

  1. ಕನ್ನಡತಿಯನ್ನು ಗೆಳತಿ ಭಾವದಿಂದ ಕಾಣುವ ನಿಮ್ಮ ಹೃದಯವಂತಿಕೆ ಶ್ಲಾಂಘನೀಯ. ಉತ್ತಮ ಕವನ ಮೇಡಂ.

    ReplyDelete
  2. ಪ್ರಭಾಮಣಿಯವರೆ,
    ಕನ್ನಡ ನುಡಿ ನಿಜವಾಗಿಯೂ ನಮ್ಮ ಆಪ್ತಸ್ನೇಹಿತ/ಸ್ನೇಹಿತೆ. ಬಹಳ ಆತ್ಮೀಯತೆಯಿಂದ ಈ ಗೆಳೆತನದ ಸೊಗಸನ್ನು ಬಣ್ಣಿಸಿದ್ದೀರಿ.
    ರಾಜ್ಯೋತ್ಸವದ ಶುಭಾಶಯಗಳು!

    ReplyDelete
  3. ಆಹಾ! ಕನ್ನಡ ಮಾತೆಯ ಬಗ್ಗೆ ಮಧುರವಾದ ಸಾಲುಗಳು ಓದಿ ಮನ ಅರಳಿತು. ನಿಮಗೂ ಸಹ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

    ReplyDelete
  4. ಆ ತರಹ ಒಬ್ಬಳು ಗೆಳತಿ ಅಥವಾ ಗೆಳೆಯ ಇದ್ದರೆ ಸಾಕು..... ತು೦ಬಾ ಚೆನ್ನಾಗಿದೆ....

    ReplyDelete
  5. ಕನ್ನಡವನ್ನಾ, ಗೆಳತಿ , ತಾಯಿಯ ರೀತಿಯಲ್ಲಿ ವರ್ಣಿಸಿ ಚೆಂದದ ಕವಿತೆ. ಚೆನ್ನಾಗಿದೆ.

    ReplyDelete