Saturday, March 31, 2012

ಮಡಿಕೆಗಳಡಿಯಲ್ಲಿ.............

ಬೀರುವಿನಡಿ
ಭದ್ರವಾಗಿರುವ
ಹಳೆಸೀರೆಗಳ
ಮಡಿಕೆಗಳನೇಕೋ
ಬಿಡಿಸಲಾಗುತ್ತಲೇ ಇಲ್ಲ
ಪುರಸೊತ್ತು
ಸಮೀಪಿಸುತ್ತಿದ್ದರೂ
ಇಳಿಹೊತ್ತು!

ಎ೦ದೋ ಇಟ್ಟವುಗಳ
ಜೊತೆಗೆ
ಒ೦ದೊ೦ದೇ ಪೇರಿಸಿ
ಪದರ ಪದರಗಳಡಿ
ಹೂತು ಹೋಗುತ್ತಿರುವ ಭಾವ
ಆದರೂ...
ಹೊಸ ಹೊಸವು
ಸೇರುವುದಕ್ಕಿಲ್ಲ ಅಭಾವ

ಕೈಗೆಟುಕದ೦ತೆ ಅ೦ಗಡಿಯ
ಕಪಾಟಿನಲ್ಲಿದ್ದಾಗಲಷ್ಟೇ
ನೂತನ
ಒಮ್ಮೆ ತನ್ನದಾಗಿಸಿ
ಬೀರು ಸೇರಿದಾಕ್ಷಣವೇ
ಹಳೆತನದ ವಹನ
ಹೊಸತನದ ದಹನ!

ತನ್ನದಾಗುತ್ತಿರುವ ರಾಶಿಗಳ
ಅರಿಯಲಾಗದ ಮೌಲ್ಯ
ಮಿಲಿಯ-ಮಿಲಿಯ ವರ್ಷಗಳ
ಪೂರ್ವದಲೋ ಎ೦ಬ೦ತೆ
ಮಡಿಕೆಗಳಡಿ
ಪಳೆಯುಳಿಕೆಯಾದ ಬಾಲ್ಯ!

ಮಡಿಕೆಗಳ ಮಡಿಲಲ್ಲೇ
ಮಗುವಾಗುವ
ಚಡಪಡಿಕೆಯಲಿ
ಹುದುಗಲಿಚ್ಚಿಸುವ ಮನಕೆ
ಕೆಲ ಕ್ಷಣಗಳನಾದರೂ
ತನ್ನದಾಗಿಸಿಕೊಳ್ಳುವ
ತವಕ
ಸಾಥ೯ಕವೆನಿಸಿಕೊಳ್ಳಲು ಬದುಕ!

7 comments:

  1. ಹೌದು, ಒಮ್ಮೆ ಮಾತ್ರ ವಿನೂತನ.. ಮತ್ತೆ ಪುನಃ ಮರೆತು ಬಿಡುವುದೋ ಅತಿಯಾದ ಹೊಸತನದ ಮೋಹವೋ ... ಚೆನ್ನಾಗಿದೆ ಮೇಡಂ .ರಾಮನವಮಿಯ ಶುಭಾಶಯಗಳು..

    ReplyDelete
    Replies
    1. @ ಈಶ್ವರ್ ಭಟ್ ರವರೆ,
      ನನ್ನ ಕವನಕ್ಕೆ ಮೆಚ್ಚುಗೆಯನ್ನು ತಿಳಿಸಿ ಶೀಘ್ರವಾಗಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

      Delete
  2. ಮನದ ಮಡಿಕೆಗಳ ಅಡಿಯಲ್ಲಿ ಹುದುಗಿರುವ ನೆನಪುಗಳೂ ಹಾಗೆ ಅಲ್ಲವೇ!!?

    ReplyDelete
  3. tumbaa chennaagi heliruviri-hosatu alataaguvadara bagge matte hosa prateeksheyalli.

    ReplyDelete
  4. ಸೀರೆಯ ಮಡಿಕೆಗೂ, ಭಾವನೆಯ ಮಡಿಕೆಗೂ ಬಿಡಿಸಲಾರದ ನಂಟು! ಉತ್ತಮ ಕವನಕ್ಕಾಗಿ ಅಭಿನಂದನೆಗಳು.

    ReplyDelete
  5. ಮಡಿಕೆಗಳಡಿಯಲ್ಲಿ ಬಿಡಿಸಿಡಲಾಗದ ಭಾವಗಳ ತೋಡಿಕೆ....
    ಚೆನ್ನಾಗಿದೆ ಮೇಡಂ ಕವಿತೆ...

    ReplyDelete
  6. ಅರ್ಥಪೂರ್ಣ ಸಾಲುಗಳು..

    ReplyDelete