Sunday, August 5, 2012

ಆಸ್ಫೋಟ

ತೆರೆದಿತ್ತು ಮೇಲ್ಮೈ
ಅವಕಾಶಕ್ಕ೦ದು
ನಿರ೦ತರ ಆವೀಕರಣ
ನಿರಾಳ
ಸಾ೦ತ್ವನ

ಮುಚ್ಚಿದ ಧಾರಕದಲ್ಲೀಗ
ಮಿತಿ ಮೀರಿದ
ಬಾಹ್ಯದೊತ್ತಾಯ

ಹಬೆಯ ಹೊರ 
ನೂಕಲೂ ಆಗದೇ
ಇ೦ಗಲೂ ಬಿಡದೇ
ಆ೦ತರ್ಯದಲೇ
ಕುದ್ದು ಕುದ್ದು...
ಅಧಿಕವಾದ
ಅ೦ತರ೦ಗದೊತ್ತಡ

ಕ್ಷಣಗಣನೆಯಾಗುತಿದೆ
ಆಸ್ಫೋಟಕೆ!





4 comments:

  1. ಅಂತರಿಕ ಒತ್ತಡದ ಬಗ್ಗೆ ಚೆಂದದ ಕವನ.

    ReplyDelete
  2. ಒಳಾವರಣ ತುಸು ಬಾಹ್ಯಕ್ಕೂ ತೆರೆದಿಟ್ಟರೆ ತಾನೆ ಒಳ ಕುಡಿಯ ಆವಿ ಹೊರ ನುಸುಳಿ ಒಳ ಒತ್ತಡ ಕಮ್ಮಿಯಾಗೋದು?

    ReplyDelete
  3. ಒಳಗಿನ ಒತ್ತಡ ಸಿಡಿಯುವ ಸಮಯ ಬರುತಲಿದೆ...
    ಚೆನ್ನಾಗಿದೆ...

    ReplyDelete
  4. ಆಸ್ಫೋಟದ ಪ್ರಕ್ರಿಯೆಯ ಉತ್ತಮ ವರ್ಣನೆ!

    ReplyDelete