Wednesday, August 29, 2012

ದ್ವಂದ್ವ


ಆಕೆ ಬೆಳಕಿನಂತೆ
ಒಮ್ಮೊಮ್ಮೆ ಕಣರೂಪಿ
ಮತ್ತೊಮ್ಮೆ
ಬಳುಕು ಅಲೆ
                          
 ಇದ್ದಲ್ಲೇ ನೇರ ಪಥ
ಮಧ್ಯವರ್ತಿ
ಬದಲಾಯಿಸಿದಾಗ ಮಾತ್ರ
ವಕ್ರನಡೆ
ರಾಚಿದ ಮೇಲ್ಮೈಯ
ಬಣ್ಣವನ್ನೇ ಬಯಲು
ಮಾಡಲೂ ಇಲ್ಲ ಬಿಡೆ!

ತಲೆಮಾರಿನಿಂದ ಬಂದ
ಮಡಿ ಮೈಲಿಗೆ
ವ್ರತ ನೇಮ
ಸ್ವಂತಿಕೆಯ ಹೋಮ

ಹಿರಿಯರಿಗೆ
ತಗ್ಗಿಬಗ್ಗಿ
ನವಪೀಳಿಗೆಯ
ನಾಸ್ತಿಕತೆಗೂ ಒಗ್ಗಿ
ಸಾಗುವ
ಪೀಳಿಗೆಯಂತರದ ಸೇತು

ಏಕೆ
ದ್ವಂದ್ವ ಸ್ವಭಾವ
ಎನುವ ಮಾತು?


11 comments:

  1. ಈ ದ್ವಂದ್ವದಲ್ಲೇ ಆಕೆಯ ಪ್ರಭೆಯೂ ಇದೆ. ಅದೇ ಆಕೆಯ ಶಕ್ತಿ.

    ReplyDelete
    Replies
    1. ನಿಜ ಬದರಿಯವರೇ, ಆದರೆ ಅದು ಆಕೆಗೆ ಅನಿವಾರ್ಯವಾಗಿದೆ. ಪ್ರತಿಕ್ರಿಯೆಗಾಗಿ ಧನ್ಯವಾದಗಳು.

      Delete
  2. kavana shirshikeyante ide kavana...

    tumbaa chennaagide...

    ReplyDelete
    Replies
    1. ಬಹಳ ದಿನಗಳ ನ೦ತರ ನನ್ನ ಬ್ಲಾಗ್ ಗೆ ಬ೦ದು ಆತ್ಮೀಯವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮಗೆ ಹೃತ್ಪೂರ್ವಕ ನಮನಗಳು.

      Delete
  3. ತಲೆಮಾರಿನಿಂದ ಬಂದ
    ಮಡಿ ಮೈಲಿಗೆ
    ವ್ರತ ನೇಮ
    ಸ್ವಂತಿಕೆಯ ಹೋಮ..........nice lines ...ishta aitu madam

    ReplyDelete
    Replies
    1. `ದ್ವ೦ದ್ವ'ದ ಸಾಲುಗಳನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು ಸರ್.

      Delete
  4. ದ್ವಂದ್ವವಿಲ್ಲದ ಬದುಕು ಸಾಧ್ಯವೆ? ಉತ್ತಮ ಕವನ.

    ReplyDelete
    Replies
    1. ಸತ್ಯವಾದ ಮಾತು ಸರ್, ಆದರೆ ಆ ಹ೦ತಕ್ಕಾಗಿ ಪ್ರಯತ್ನಿಸಬೇಕು. ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು.

      Delete
  5. ತುಂಬಾ ಚನ್ನಾಗಿದೆ.. ಒಬ್ಬ ತಾಯಿಯ ದ್ವಂದ್ವವನ್ನು ಚನ್ನಾಗಿ ಹೋಲಿಸಿದ್ದೀರಿ ಮೇಡಂ..
    ಬೆಳಕಿನ ದ್ವಂದ್ವ.. ನಡೆವ ದಾರಿಯಲ್ಲಿನ ದ್ವಂದ್ವ.. ವಿಚಾರಗಳ ದ್ವಂದ್ವ.. ಆಹಾ... ಅಂತ್ಯ ಚನ್ನಾಗಿದೆ.. 'ಪೀಳಿಗೆಯಂತರದ ಸೇತು '

    ನನ್ನದೊಂದು ಚಿಕ್ಕ ಕೊಸರು..
    ಒಂದು ಸೇತುವೆಗೂ ದ್ವಂದ್ವ ಅಲ್ಲವೇ?
    ಆ ತೀರ ಹಿಡಿಯಲೋ
    ಈ ತೀರ ಹಿಡಿಯಲೋ
    ಕೊನೆಗೆ ದ್ವಂದ್ವದಲ್ಲಿಯೇ ಬದುಕು
    ದ್ವಂದ್ವದಲ್ಲಿಯೇ ಸಾರ್ಥಕತೆ!

    ReplyDelete
    Replies
    1. ಇದು ೧೪-೦೪-೨೦೦೨ರಲ್ಲಿ ಬರೆದ ಕವನ. ನನ್ನ ತಾಯಿಯ ಮನಃ ಸ್ಥಿತಿಯ ಬಗ್ಗೆ ಆಲೋಚಿಸಿಯೇ ಬರೆದದ್ದು. `ಸೇತುವೆಗೂ ದ್ವಂದ್ವ' ಎನ್ನುವ ನಿಮ್ಮ ಅಭಿಪ್ರಾಯ ಚಿ೦ತಿಸಲು ಯೋಗ್ಯವಾಗಿದೆ. ಪ್ರತಿಕ್ರಿಯೆಗಾಗಿ ಧನ್ಯವಾದಗಳು.

      Delete
  6. dwandvada saalugalalle avala ellavannu joteyalli konduyyuva bage hennina vaishyalyateyannu heluttade.

    ReplyDelete