Tuesday, September 2, 2014

ನಿನ್ನೊಂದು ಮುಗುಳ್ನಗು.....

`ಪ್ರೇರಣಾ ಜಾನಪದ, ಸಾಹಿತ್ಯ ಮತ್ತು ಸಾ೦ಸ್ಕೃತಿಕ ವೇದಿಕೆ, ಚನ್ನರಾಯಪಟ್ಟಣ ಹಾಗೂ ಕನ್ನಡ ಮತ್ತು ಸ೦ಸ್ಕೃತಿ ಇಲಾಖೆ, ಬೆ೦ಗಳೂರು ಇವರ ಸ೦ಯುಕ್ತಾಶ್ರಯದಲ್ಲಿ ಚನ್ನರಾಯಪಟ್ಟಣದಲ್ಲಿ ನಡೆದ `ಚನ್ನರಾಯಪಟ್ಟಣ ತಾಲ್ಲೂಕಿನ ಸಾ೦ಸ್ಕೃತಿಕ ಅವಲೋಕನ' ಹಾಗೂ `ಕವಿಗೋಷ್ಠಿ'ಯಲ್ಲಿ ವಾಚಿಸಿದ ಕವನವನ್ನು ತಮ್ಮ ಮು೦ದಿಡುತ್ತಿದ್ದೇನೆ. ಬಹಳ ಹಿ೦ದೆ ಬರೆದ ಈ ಕವನವು `ಸಮಾಜ ಮುಖಿ'ಯ ೨೦೦೭ರ ವಾರ್ಷಿಕ ವಿಶೇಷಾಂಕದಲ್ಲಿ ಪ್ರಕಟವಾಗಿದೆ.


ನಿನ್ನೊಂದು ಮುಗುಳ್ನಗು..... 

ಒಂದೊಂದೇ
ಪಾತ್ರ ನಟಿಸಿ
ಬಂದಾಗಲೂ
ನಿನ್ನ ಮುಗುಳ್ನಗು
ಪ್ರೋತ್ಸಾಹಿಸಿದಂತೆ
ಮತ್ತೊಂದೇ
ಪಾತ್ರಕೆ
ಸಜ್ಜು!

ಪಾತ್ರಗಳು
ಇನ್ನೊಂದು
ಮತ್ತೊಂದು...
ಹೆಚ್ಚಾದಂತೆ
ಮಧ್ಯಂತರವೇ
ಶೂನ್ಯವಾಗಿ
ನಿನ್ನೊಡನಾಟವೇ
ಅಲಭ್ಯ

ಪಾತ್ರದಿಂದ ಪಾತ್ರಕ್ಕೆ
ಜಿಗಿಯುತ್ತಾ
ತಾಧ್ಯಾತ್ಮ ಹೊಂದಿ
ನಿನ್ನಿಂದ ದೂರ
ಸರಿದಂತೆ
ವೃದ್ಧಿಸುವ
ತಳಮಳ!

ನಿನ್ನ
ಸನಿಹವಿರಲು
ಸಂಭಾಷಿಸಲು
ನಿನ್ನೊಡನಾಟಕೆಂದು
ಹಂಬಲಿಸುವಾಗೆಲ್ಲಾ
ಏನೋ ಗೊಂದಲ

ನೇಪಥ್ಯಕ್ಕೆ
ಸರಿಯಲು
ನಿವೃತ್ತಿಗೆ
ಹಂಬಲಿಸುವುದೆ?

ನಿನ್ನಿರವನರಿತದ್ದೇ
ಸಂಪರ್ಕಿಸಲು
ಸಡಗರಿಸಿದಾಗ...
ಏನಾಶ್ಚರ್ಯ!

ಮುಗುಳ್ನಗೆ
ಮಾಯವಾಗಿ
ಒತ್ತಡದ
ಗೂಡಾಗಿರುವಿ
ಎಲ್ಲಿ
ಆ ನಿನ್ನ
ಹಸನ್ಮುಖ?




3 comments:

  1. ಮೈತ್ರಿಭಾವವು ಮನವನ್ನು ಮುದಗೊಳಿಸುವುದು ಎನ್ನುವುದನ್ನು ನಿಮ್ಮ ಕವನ ಸುಂದರವಾಗಿ ತೋರಿಸುತ್ತಿದೆ.

    ReplyDelete
  2. ಕವನ ಚೆನ್ನಾಗಿದೆ....
    ಬದುಕಿಗೆ ಏನೆಲ್ಲಾ ಬಂದು ಏನೆಲ್ಲಾ ಗೊಂದಲವಾದರು ಅದಕ್ಕೋಂದು ಸಿಹಿ ಗುಳಿಗೆ ಮುಗಳ್ನಗೆನೆ ಅಲ್ವಾ......

    ReplyDelete
  3. arthapoorna satvpoorna kavana,dhanyavaadagalu.

    ReplyDelete