Wednesday, April 1, 2015

ಹಾಸ್ಯ `ಹನಿ'ಗಳು!

ಎಪ್ರಿಲ್ 1 ಕ್ಕಾಗಿ ಕೆಲವು ಹಾಸ್ಯ `ಹನಿ'ಗಳು! `ಹನಿ'ಗಳು ನಿಮ್ಮೆದುರಿವೆ.`ಹಾಸ್ಯ'ಕ್ಕಾಗಿ ಶೋಧಿಸಿ ಪ್ರತಿಕ್ರಿಯಿಸಿ!
ಲಕ್ಷ್ಮಣ ರೇಖೆ
ಅಂದು ಆ ರೇಖೆ ದಾಟಿ
ಪಜೀತಿ ಪಟ್ಟಳು
ತರಳೆ
ಇಂದು
ಈ ರೇಖೆ ದಾಟಿಯೂ
ಜೀವ ಉಳಿಸಿಕೊಳ್ಳುತಿವೆ
ಜಿರಲೆ!
*
ಛಾಪು
ನೆರೆತ ಕೂದಲಿಗೇಕೆ
ಅಚ್ಚ ಬಿಳುಪಿನ ಹೊಳಪು?
ಇರಬಹುದೇ
ಹರಯವ ಮೆಟ್ಟಿದ
ದಿಗ್ವಿಜಯದ ಛಾಪು!
*
ಸ್ಪರ್ಧೆ
ಅವಳು ಗಂಡನಲ್ಲಿ
ಬೇಡಿಕೆ ಇಟ್ಟಳು
ಅಮೇರಿಕನ್ ಡೈಮಂಡ್ ಓಲೆಗೆ
ಆತ ಹಣಕೂಡಿಸಿ
ಓಲೆ ಮಾಡಿಸುವ ವೇಳೆಗೆ
ಅವಳ ಕಿವಿಯ ಮೇಲಿನ
ಕೂದಲೆಲ್ಲಾ ತುತ್ತಾಗಿತ್ತು
ಬಿಳಿ ನೆರೆಯ ಧಾಳಿಗೆ
ಓಲೆ ಹಾಕಿಕೊಂಡಾಗ.....
ಹರಳಿನ ಹೊಳಪು
ಕೇಶದ ಬಿಳುಪು
ಇಳಿದಿದ್ದವು ಸ್ಪರ್ಧೆಗೆ!

1 comment:

  1. ಲಕ್ಷ್ಮಣ ರೇಖೆ : ಉತ್ತಮ ಬ್ರಾಂಡೂ...
    ಛಾಪು: ಅಲ್ಲ ಬಿಡಿ ಅದು ಘೋರ ಸೋಲಿನ ಸಂಕೇತ!
    ಸ್ಪರ್ಧೆ: ತುಸು late ಆಯಿತು!

    ReplyDelete