Thursday, October 7, 2010

'ಹನಿ'ಗಳು

ಬದುಕಿಗೆ
ಬೇಕಾದ೦ತೆ
ಬಳಸಿಕೋ
ನಿನ್ನ ತೆಕ್ಕೆಯಲ್ಲಿ
ಬ೦ಧಿ ನಾನಿಲ್ಲಿ
ಆದರೆ......
ಬ೦ಧ ಮುಕ್ತಳಾಗುವಾಗ
ತೃಪ್ತಿಯಲಿ
ತುಟಿಯರಳಲಿ!

ನಿನ್ನ೦ತೆ
ನಾನು ನಿನ್ನೆದುರು
ತೆರೆದ ಪುಸ್ತಕ
ಓದಿ ಅರ್ಥೈಸಿಕೊಳುವುದು
ನಿನ್ನ ಕಾಯಕ!

ಬದುಕು
'ಬದುಕು' ಎ೦ದರೇನೆ೦ದು
ನನ್ನ ನಾ
ಕೇಳಿಕೊ೦ಡ ಚಣ
ಕಣ್ಣು ದಿಟ್ಟಿಸುತಿತ್ತು
ಸಿ೦ಬಳದಲಿ
ಸಿಲುಕಿಕೊ೦ಡ
ನೊಣ!

ಕೋರಿಕೆ
ನೀ
ನನ್ನ ಹಾದಿಯ
ನಿರ್ದೇಶಿಸುತ್ತಿರು
ಎ೦ದೂ
ನಿರ್ಧರಿಸದಿರು.

ಭರವಸೆ
ಕ೦ದಾ,
ನಾನಾಗಬಯಸುವೆ
ನಿನ್ನ ಸ್ವಪ್ನ ಸೌಧದ
ಅಡಿಗಲ್ಲು
ಎ೦ದೂ ಆಗುವುದಿಲ್ಲ
ನಿನ್ನ ಪ್ರಗತಿ ಪಥದ
ಅಡ್ಡಗಲ್ಲು!

22 comments:

  1. ಮೇಡಂ;ಚೆಂದದ ಹನಿಗಳು.ಅಭಿನಂದನೆಗಳು.

    ReplyDelete
  2. ಕೊನೆಯ ಹನಿಯು ತುಂಬ ಚೆನ್ನಾಗಿದೆ.

    ReplyDelete
  3. ಚೆ೦ದದ ಹನಿಗಳು..ಎಲ್ಲವೂ ಚೆನ್ನಾಗಿವೆ.
    ಕೋರಿಕೆ ಮತ್ತು ಭರವಸೆ ತು೦ಬಾ ಹಿಡಿಸಿದವು.

    ReplyDelete
  4. @ ಸುನಾಥ್ ರವರೆ,
    @ ಡಾ. ಕೃಷ್ಣಮೂರ್ತಿಯವರೇ,
    @ ಮನಮುಕ್ತಾ ಅವರೇ,
    ತಾವು ನನ್ನ 'ಹನಿ'ಗಳನ್ನು ಮೆಚ್ಚಿ ಶೀಘ್ರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಬಹಳ ಸ೦ತಸವಾಗಿದೆ. ಧನ್ಯವಾದಗಳು.

    ReplyDelete
  5. ಒಂದಕ್ಕಿಂತಾ ಒಂದು ಚೆನ್ನಾಗಿವೆ. ಮೊದಲನೆಯದು ಮತ್ತು ಕೊನೆಯದು ಸೂಪರ್!

    ReplyDelete
  6. ಹನಿಗವನಗಳು ಸೊಗಸಾಗಿವೆ..

    ಬದುಕು ಹನಿ ತುಂಬಾ ಇಷ್ಟವಾಯ್ತು

    ReplyDelete
  7. @ ವೆಂಕಟೇಶ್ ಹೆಗ್ಡೆ ಯವರೇ,
    @ ಸೀತಾರಾಂರವರೇ,
    @ ಸಾನ್ವಿಯ ತಂದೆಯವರೇ,
    ನನ್ನ 'ಹನಿ'ಗಳನ್ನು ಇಷ್ಟಪಟ್ಟು ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  8. ಪ್ರಭಾಮಣಿ ಮೇಡಮ್..

    ಚೆನ್ನಾಗಿವೆ ನಿಮ್ಮ ’ಹನಿಗಳು’. ಕೋರಿಕೆ ಮತ್ತು ಭರವಸೆ ಇಷ್ಟವಾದವು.

    ಶ್ಯಾಮಲ

    ReplyDelete
  9. @ಶ್ಯಾಮಲರವರೆ,
    ನನ್ನ ಬ್ಲಾಗ್ ಗೆ ಸ್ವಾಗತ. ನನ್ನ 'ಹನಿ'ಗಳನ್ನು ಓದಿ ಪ್ರುತ್ಸಾಹಕರ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  10. "ಬೇಕಾದ೦ತೆ
    ಬಳಸಿಕೋ
    ನಿನ್ನ ತೆಕ್ಕೆಯಲ್ಲಿ
    ಬ೦ಧಿ ನಾನಿಲ್ಲಿ
    ಆದರೆ......
    ಬ೦ಧ ಮುಕ್ತಳಾಗುವಾಗ
    ತೃಪ್ತಿಯಲಿ
    ತುಟಿಯರಳಲಿ!
    "
    ಈ ಸಾಲುಗಳು ಇಷ್ಟವಾದವು..

    ReplyDelete
  11. ಸೊಗಸಾದ ಹನಿಗವನಗಳು....
    "ನಿನ್ನ೦ತೆ" ಹನಿ ತುಂಬಾ ಇಷ್ಟವಾಯ್ತು....

    ReplyDelete
  12. @ ದೊಡ್ಡಮನಿಯವರೇ,
    @ ಮಹೇಶ್ ರವರೇ,
    @ ಮನಸಿನ ಮನೆಯವರೇ,
    ನನ್ನ 'ಹನಿ'ಗಳನ್ನು ಆನ೦ದಿಸಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  13. ಪ್ರಭಾಮಣಿಯವರೇ ನಿಮ್ಮಲ್ಲಿ ಮುಂಚೆಯೂ ಬಂದಿದ್ದೇನೆ...ಹನಿಗವನಗಳು ಹಿಡಿಸಿದವು..ಅದರಲ್ಲೂ ನಿನ್ನಂತೆ ಮತ್ತು ಭರವಸೆ ಎರಡು ತುಂಬಾನೇ..
    ನನ್ನ ಕವನ ಸಂಕಲನ ‘ಜಲನಯನ‘ ಆಗಸ್ಟ್ ೨೨ ರಂದು ಬಿಡುಗಡೆಯಾಯ್ತು...ಬೆಂಗಳೂರಲ್ಲಿ ಕನ್ನಡ ಭವನದ ‘ನಯನ‘ದಲ್ಲಿ...ಡುಂಡಿರಾಜ್ ಸಂಕಲನ ಬಿಡುಗಡೆ ಮಾಡಿದರು...ನಿಮ್ಮ ಅನಿಸಿಕೆ ತಿಳ್ಸಿ...ಪುಸ್ತಕ ‘ನವ ಕರ್ನಾಟ‘ ಮತ್ತು ‘ಸಪ್ನ‘ ದಲ್ಲಿ ಸಿಗುತ್ತೆ...

    ReplyDelete
  14. @ಜಲನಯನರವರೆ,

    ಬಹಳ ಕಾಲದ ನ೦ತರ ನನ್ನ ಬ್ಲಾಗ್ ಗೆ ಬ೦ದು ನನ್ನ 'ಹನಿ'ಗಳನ್ನು ಓದಿ ಪ್ರುತ್ಸಾಹಕರ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಮತ್ತು ಶಿವುರವರ ಪುಸ್ತಕ ಬಿಡುಗಡೆಯ ಹೃದಯ ಸ್ಪರ್ಶಿ ಸಮಾರ೦ಭದ ಬಗ್ಗೆ ಬ್ಲಾಗ್ ಗಳಲ್ಲಿ ಓದಿ ನನಗೂ ಪಾಲ್ಗೊ ಳ್ಳಲಾಗಲಿಲ್ಲವಲ್ಲಾ ಎಂದುಕೊಳ್ಳುತ್ತಿದ್ದೆ. ನಿಮ್ಮ ಪುಸ್ತಕ ದೊರೆಯುವ ಸ್ಥಳ ತಿಳಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  15. ಪ್ರಭಾಮಣಿಯವರೆ ,

    ನಿಮ್ಮ ಲೇಖನಗಳನ್ನು ನಾನೂ ಮಂಗಳ, ಕರ್ಮವೀರಗಳಲ್ಲಿ ಓದಿದ್ದೇನೆ. ನಿಮ್ಮ ಎಲ್ಲಾ ಹನಿಗಳು ಚೆನ್ನಾಗಿವೆ. ನೀವು ನನ್ನ ಬ್ಲಾಗ್ ಗೆ ಭೇಟಿ ನೀಡಿ ಸುಂದರ ಪ್ರಕಿಯ್=ಕ್ರೀಯೆ ನೀಡಿದ್ದು ಖುಷಿ ಕೊಟ್ಟಿತು. ಹೀಗೆ ಬರುತ್ತಾ ಇರಿ...ಧನ್ಯವಾದಗಳು...

    ReplyDelete
  16. ಮೇಡಂ ಹನಿಗವನಗಳು ಸೆಳೆದವು.

    ಫಾಲೋಯರ್ ಗ್ಯಾಡ್ಜೆಟ್ ನನ್ನ ಬ್ಲಾಗಿನಲ್ಲಿ ಹಾಕಲು ಬರುತ್ತಿಲ್ಲ,
    ಸಹಾಯ ಮಾಡಿ.

    ಧನ್ಯವಾದಗಳು.

    ReplyDelete
  17. ಹನಿಗವನಗಳು ಸೊಗಸಾಗಿವೆ..

    ಕೋರಿಕೆ ಮತ್ತು ಭರವಸೆ ಇಷ್ಟವಾದವು.

    ReplyDelete
  18. @ ashok ravare,
    Nanna blog ge svaagata. nimma protsaahakara pratikriyege dhanyavaadagaLu.modale nanna lekhanagaLannu odiddiirendu tiLidu tumbaa aanandavaaytu.baruttiri.

    ReplyDelete
  19. @ gubbi sathish ravare,
    nimma protsaahakara pratikriyege dhanyavaadagaLu.
    nanna blog na ellariitiyindalu prarambhisikottiddu nanna magalu. nannage adara bagge tilidilla. post maadtini, ashte.avalu bandaga keli tilisuttene.baruttiri.

    ReplyDelete
  20. @ venkata krishnaravare,
    Nanna blog ge svaagata. nivu nanna hanigalannu ishtapattu pratikriyisiddakkaagi dhanyavaadagaLu.
    baruttiri.

    ReplyDelete