Saturday, October 16, 2010

'ಹನಿ'ಗಳು

ಗಾಳಿಪಟ-1
ಏರಿದಷ್ಟೂ ಬಾನಿನಲಿ
ಇಹುದು ಎಡೆ
ಏರಿಸುವ ದಾರದ್ದೇ
ಇದಕೆ ತಡೆ!

ಹೊಣೆ
ಸೂತ್ರ ಹಿಡಿದೇ
ಹಾರಿಬಿಟ್ಟೆ
ಸ್ವತ೦ತ್ರವಾಗಿ ವಿಹರಿಸು
ನಿನ್ನದೇ ಗುರಿಯತ್ತ ಚಲಿಸು,
ಕಣ್ಬಿಟ್ಟೆ ದಾರ ಜಗ್ಗಿದಾಗ
ಪಟ ಹೊಡೆಯುತ್ತಿತ್ತು
ಅನಿಯ೦ತ್ರಿತ ಲಾಗ!

ಗಾಳಿಪಟ-2
ಹಾರುವ ಮೊದಲೇ
ಹುಚ್ಚೆದ್ದು ಲಾಗ
ಹೊಡೆದದ್ದು
ಮೇಲೇರಿದ೦ತೆ
ನಿರಾತ೦ಕ!



24 comments:

  1. ಗಾಳಿಪಟ-೧ ಮತ್ತು ೨, ಸು೦ದರ ಮತ್ತು ಅರ್ಥಗರ್ಭಿತ.

    ಶುಭಾಶಯಗಳು
    ಅನ೦ತ್

    ReplyDelete
  2. @ ಅನ0ತ್ ರವರೆ,
    ಶೀಘ್ರ, ಪ್ರೋತ್ಸಾಹಕರ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  3. ಚಿಕ್ಕ ಚೊಕ್ಕ ಸಾಲುಗಳು

    ReplyDelete
  4. ಸು೦ದರ ಹನಿಗಳು..ಚೆ೦ದದ ಭಾವದಲ್ಲಿ...ನನಗೂ ಗಾಳೀಪಟದ ಹನಿಗಳು ತು೦ಬಾ ಇಷ್ಟವಾಯ್ತು.

    ReplyDelete
  5. ಜೀವನವೂ ಹಾಗೆ ಗಾಳಿಪಟದ ಹಾರಾಟದಂತೆ.ಸುಂದರ ಕವಿತೆ.ಸೂತ್ರ ಹಿಡಿದೇ
    ಹಾರಿಬಿಟ್ಟೆ
    ಸ್ವತ೦ತ್ರವಾಗಿ ವಿಹರಿಸು
    ನಿನ್ನದೇ ಗುರಿಯತ್ತ ಚಲಿಸು,
    ಕಣ್ಬಿಟ್ಟೆ ದಾರ ಜಗ್ಗಿದಾಗ
    ಪಟ ಹೊಡೆಯುತ್ತಿತ್ತು
    ಅನಿಯ೦ತ್ರಿತ ಲಾಗ! ಇಷ್ಟವಾದ ಸಾಲುಗಳು

    ReplyDelete
  6. ಮೇಡಂ;ಗಾಳಿ ಪಟದ ಹನಿಗಳು ಅರ್ಥಗರ್ಭಿತ.ಸುಂದರ ಹನಿಗಳನ್ನು ನೀಡಿದ್ದಕ್ಕೆ ಧನ್ಯವಾದಗಳು.

    ReplyDelete
  7. ಗಾಳಿಪಟದ ಮೂರು ಅವಸ್ಥೆಗಳನ್ನು ಮೂರು ಹನಿಗಳಲ್ಲಿ ಹಿಡಿದಿದ್ದೀರಿ. ಕಿರಿದರೊಳ್ ಪಿರಿದರ್ಥವೆನ್ನುವದು ಇದಕ್ಕೇ ತಾನೆ?

    ReplyDelete
  8. ನಮಸ್ತೆ. ಇದು ನನ್ನ ಮೊದಲ ಭೇಟಿ ನಿಮ್ಮ ಬ್ಲಾಗಿಗೆ.

    ಗಾಳಿಪಟ ೧ ಮತ್ತು ೨ ರ ನಡುವೆ ಹೊಣೆ ಮೂರೂ ಚುಟುಕಗಳು ಚೆನ್ನಾಗಿವೆ.
    ಶುಭಾಶಯಗಳು.

    ReplyDelete
  9. ಅನಂತ್ ಸರ್ ಹೇಳಿದಂತೆ ಅರ್ಥ ಗರ್ಭಿತ

    ಮತ್ತಷ್ಟು ಬರಲಿ

    ReplyDelete
  10. @ ದೀಪ ಸ್ಮಿತಾ ಅವರೇ,
    ನನ್ನ ಬ್ಲಾಗ್ ಗೆ ಸ್ವಾಗತ. 'ಹನಿ'ಗಳನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  11. @ ಮನಮುಕ್ತಾ ಅವರೇ,
    ನನ್ನ 'ಗಾಳಿಪಟ'ಗಳನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  12. @ ನಾಗರಾಜ್ ಅವರೇ,
    ನನ್ನ 'ಹನಿ'ಗಳನ್ನು ಇಷ್ಟಪಟ್ಟಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  13. @ ಬಾಲು ಅವರೇ,
    ನನ್ನ 'ಹನಿ'ಗಳಲ್ಲಿಯ ಅ೦ತರಾರ್ಥವನ್ನು ಮೆಚ್ಚಿದ್ದಕ್ಕಾಗಿ ಹಾಗೂ 'ಹೊಣೆ' ಯನ್ನು ಇಷ್ಟಪಟ್ಟಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  14. @ ತರುಣ್ ಅವರೇ,
    ನನ್ನ 'ಹನಿ'ಗಳಲ್ಲಿಯ ಅ೦ತರಾರ್ಥವನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  15. @ ಕೃಷ್ಣಮೂರ್ತಿಯವರೇ ,
    ನನ್ನ 'ಹನಿ'ಗಳನ್ನು ಅರ್ಥಗರ್ಭಿತವಾಗಿವೆ ಎ೦ದು ಇಷ್ಟಪಟ್ಟಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  16. @ ಸುನಾಥ್ ರವರೇ ,
    ನನ್ನ 'ಗಾಳಿಪಟ'ದ ಮೂರೂ ಹ೦ತಗಳನ್ನು ಗುರುತಿಸಿ ಇಷ್ಟಪಟ್ಟಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  17. @ ಚ೦ದ್ರು ಅವರೇ,
    ನನ್ನ ಬ್ಲಾಗ್ ಗೆ ಸ್ವಾಗತ. 'ಹನಿ'ಗಳನ್ನು ಮೆಚ್ಚಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  18. @ ಗುರುಮೂರ್ತಿಯವರೇ ,
    ನನ್ನ 'ಹನಿ'ಗಳ ಅರ್ಥವನ್ನು ಗ್ರಹಿಸಿ ಇಷ್ಟಪಟ್ಟಿದ್ದಕ್ಕಾಗಿ ಹಾಗೂ ಪ್ರೋತ್ಸಾಹಕರವಾಗಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  19. ಪ್ರಭಾ ಮೇಡಮ್,

    ಒಂದೊಂದೇ ಪದಗಳಲ್ಲಿ ಕವನ ಬರೆಯುವುದು ನನಗೆ ಕಷ್ಟ. ನೀವು ಅದನ್ನು ಚೆನ್ನಾಗಿ ಬರೆದಿದ್ದೀರಿ.

    ReplyDelete
  20. ಬಹಳ ಅರ್ಥಪೂರ್ಣವಾದ ಹನಿಗವನಗಳು..
    ಗಾಳಿಪಟದ ಎಲ್ಲಾ ಸ್ಥಿತಿಗಳನ್ನು ಚೆನ್ನಾಗಿ ಹಿಡಿದಿಟ್ಟಿದ್ದೀರಿ.

    ReplyDelete
  21. @ ಶಿವು ಅವರೇ,
    ನನ್ನ ಬ್ಲಾಗ್ ಗೆ ಸ್ವಾಗತ. 'ಹನಿ'ಗೂಡಿದರೆ ಹಳ್ಳ! ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete
  22. @ ಸಾನ್ವಿಯ ತ೦ದೆಯವರೆ,
    ನನ್ನ 'ಗಾಳಿಪಟ'ದ 'ಹನಿ'ಗಳ ಅರ್ಥಪೂರ್ಣತೆಯನ್ನು ಮೆಚ್ಚಿ, ಸ್ಥಿತಿಗಳನ್ನು ಗುರುತಿಸಿ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯವಾದಗಳು. ಬರುತ್ತಿರಿ.

    ReplyDelete