ಮುಕ್ತ
ತಿಂದಷ್ಟೂ ಅತೃಪ್ತ
ಹೊಟ್ಟೆಬಾಕ ಹುಳುವಿಗೂ
ವೈರಾಗ್ಯ,
ಸೆರೆ
ಕೊಶದಲಿ ಬಂಧಿಯಾಗಿ,
ಫಲಿಸಿತು
ಸತತ ಮೌನ
ಧ್ಯಾನದ ಭಾಗ್ಯ,
ಹೊರಹೊಮ್ಮಿತು
ಚಿಟ್ಟೆಯಾಗಿ!
ಸಂಬಂಧ!
ಚಪ್ಪಲಿಗಳು ಮನುಷ್ಯರಂತಲ್ಲ
ಒಂದನೊಂದು ಬಿಟ್ಟಿರುವುದಿಲ್ಲ
ಒಮ್ಮೆ ಅಗಲಿದರಂತೂ
ಮತ್ತೆಂದೂ
ಸೇರುವುದಿಲ್ಲ!
ವ್ಯತ್ಯಾಸ
ಬಿಸಿಲಿಗೆ ಶಿರವೊಡ್ಡಿ
ಧರೆಗೆ ತಂಪನೀಯುವ
'ಮರ'
ಪರೋಪಕಾರಿ
ನೆತ್ತಿಗೆ ಸುಡುಬಿಸಿಲು
ಕಾಲಡಿ ಚಲಿಪ ನೆರಳಿನ
'ರೈತ'ನದೋ
ಸದಾ
'ಹಸಿದ'
ಒಡಲುರಿ.
ಉತ್ಕಟ
ಪ್ರತಿ ದು:ಖದ
ಆಳದಲ್ಲಿಯೂ
ಮತ್ತೊಂದು
ದು:ಖದ
ಭೋರ್ಗರೆತ!
ಆಶಾವಾದಿ
ಸುಳಿ ಆಳಕೆ
ಸೆಳೆಯುತಿದ್ದರೂ
ಬಳಿ ಬಂದ
ಮರದ ತುಂಡನು
ಬಿಗಿದಪ್ಪುವ ಜೀವ!
ಅರ್ಥಪೂರ್ಣ ಹನಿಗಳು!
ReplyDeleteಪ್ರಭಾ ಅವರೇ,
ReplyDeleteತುಂಬಾ ಚೆನ್ನಾಗಿವೆ ಹನಿಗಳು !
ಆಶಾವಾದಿ ಹನಿ ತುಂಬಾ ಇಷ್ಟವಾಯ್ತು
nice madam.
ReplyDeleteಮೇಡಂ;ಸುಂದರ ಹನಿಗವನಗಳು.ಅಭಿನಂದನೆಗಳು.
ReplyDeleteಮುಕ್ತ - ಅರ್ಥಪೂರ್ಣ ಹನಿಗವನ. ಅಭಿನ೦ದನೆಗಳು ಪ್ರಭಾಮಣಿ ಅವರೆ.
ReplyDeleteಅನ೦ತ್
ನನ್ನ `ಹನಿ'ಗಳಿಗೆ ಅರ್ಥಪೂರ್ಣ, ಸುಂದರ .....ಮು೦ತಾದ ಉತ್ತಮ ರೀತಿಯ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸಿದ ಎಲ್ಲ್ಲಾ ಅತ್ಮೀಯರಿಗೂ ಅನೇಕಾನೇಕ ವ೦ದನೆಗಳು. ಬರುತ್ತಿರಿ.
ReplyDeleteso meaningful and nice:-)
ReplyDeleteಹನಿಗಳೆಲ್ಲಾ ತುಂಬಾ ಇಷ್ಟವಾದವು.. ಅದರಲ್ಲೂ ಸಂಬಂಧ, ಮುಕ್ತ ಹಾಗೂ ಆಶಾವಾದಿ - ಹನಿಗಳು ಮತ್ತೂ ಇಷ್ಟವಾದವು.
ReplyDeleteಮೇಡಂ, ಅರ್ಥಪೂರ್ಣ ಹನಿಗವನಗಳು.
ReplyDeleteSundara , arthapurna hanigalu...
ReplyDeleteಅರ್ಥಪೂರ್ಣ ಹನಿಗಳು!
ReplyDeleteಹನಿಗಳೆಲ್ಲಾ ತುಂಬಾ ಇಷ್ಟವಾದವು..