Friday, March 25, 2011

ಹನಿಗಳು

ಮುಕ್ತ
ತಿಂದಷ್ಟೂ ಅತೃಪ್ತ
ಹೊಟ್ಟೆಬಾಕ ಹುಳುವಿಗೂ
ವೈರಾಗ್ಯ,
ಸೆರೆ
ಕೊಶದಲಿ ಬಂಧಿಯಾಗಿ,
ಫಲಿಸಿತು
ಸತತ ಮೌನ
ಧ್ಯಾನದ ಭಾಗ್ಯ,
ಹೊರಹೊಮ್ಮಿತು
ಚಿಟ್ಟೆಯಾಗಿ!

ಸಂಬಂಧ!
ಚಪ್ಪಲಿಗಳು ಮನುಷ್ಯರಂತಲ್ಲ
ಒಂದನೊಂದು ಬಿಟ್ಟಿರುವುದಿಲ್ಲ
ಒಮ್ಮೆ ಅಗಲಿದರಂತೂ
ಮತ್ತೆಂದೂ
ಸೇರುವುದಿಲ್ಲ!

ವ್ಯತ್ಯಾಸ
ಬಿಸಿಲಿಗೆ ಶಿರವೊಡ್ಡಿ
ಧರೆಗೆ ತಂಪನೀಯುವ
'ಮರ'
ಪರೋಪಕಾರಿ
ನೆತ್ತಿಗೆ ಸುಡುಬಿಸಿಲು
ಕಾಲಡಿ ಚಲಿಪ ನೆರಳಿನ
'ರೈತ'ನದೋ
ಸದಾ
'ಹಸಿದ'
ಒಡಲುರಿ.

ಉತ್ಕಟ
ಪ್ರತಿ ದು:ಖದ
ಆಳದಲ್ಲಿಯೂ
ಮತ್ತೊಂದು
ದು:ಖದ
ಭೋರ್ಗರೆತ!

ಆಶಾವಾದಿ
ಸುಳಿ ಆಳಕೆ
ಸೆಳೆಯುತಿದ್ದರೂ
ಬಳಿ ಬಂದ
ಮರದ ತುಂಡನು
ಬಿಗಿದಪ್ಪುವ ಜೀವ!

11 comments:

  1. ಅರ್ಥಪೂರ್ಣ ಹನಿಗಳು!

    ReplyDelete
  2. ಪ್ರಭಾ ಅವರೇ,
    ತುಂಬಾ ಚೆನ್ನಾಗಿವೆ ಹನಿಗಳು !
    ಆಶಾವಾದಿ ಹನಿ ತುಂಬಾ ಇಷ್ಟವಾಯ್ತು

    ReplyDelete
  3. ಮೇಡಂ;ಸುಂದರ ಹನಿಗವನಗಳು.ಅಭಿನಂದನೆಗಳು.

    ReplyDelete
  4. ಮುಕ್ತ - ಅರ್ಥಪೂರ್ಣ ಹನಿಗವನ. ಅಭಿನ೦ದನೆಗಳು ಪ್ರಭಾಮಣಿ ಅವರೆ.

    ಅನ೦ತ್

    ReplyDelete
  5. ನನ್ನ `ಹನಿ'ಗಳಿಗೆ ಅರ್ಥಪೂರ್ಣ, ಸುಂದರ .....ಮು೦ತಾದ ಉತ್ತಮ ರೀತಿಯ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸಿದ ಎಲ್ಲ್ಲಾ ಅತ್ಮೀಯರಿಗೂ ಅನೇಕಾನೇಕ ವ೦ದನೆಗಳು. ಬರುತ್ತಿರಿ.

    ReplyDelete
  6. ಹನಿಗಳೆಲ್ಲಾ ತುಂಬಾ ಇಷ್ಟವಾದವು.. ಅದರಲ್ಲೂ ಸಂಬಂಧ, ಮುಕ್ತ ಹಾಗೂ ಆಶಾವಾದಿ - ಹನಿಗಳು ಮತ್ತೂ ಇಷ್ಟವಾದವು.

    ReplyDelete
  7. ಮೇಡಂ, ಅರ್ಥಪೂರ್ಣ ಹನಿಗವನಗಳು.

    ReplyDelete
  8. ಅರ್ಥಪೂರ್ಣ ಹನಿಗಳು!

    ಹನಿಗಳೆಲ್ಲಾ ತುಂಬಾ ಇಷ್ಟವಾದವು..

    ReplyDelete