Tuesday, August 16, 2011

ಅನಿವಾರ್ಯವೇ?

ನಡುಗುವುದು ಭೂಮಿ
ಗಡಿಗಳಲ್ಲೂ
ರಾಷ್ಟ್ರ -ರಾಷ್ಟ್ರಗಳನಡುವಿನ
ರೇಖೆಗಳ ಅರಿವಿಲ್ಲ
ಭೂಕ೦ಪಕೆ!

ಬ೦ಡೇಳುವುದು

ಚ೦ಡಮಾರುತ
ಖ೦ಡ ಖ೦ಡಗಳಲ್ಲೂ
ಬಡವ ಬಲ್ಲಿದನೆ೦ಬ
ಭೇದವಿಲ್ಲ
ಬಿರುಗಾಳಿಗೆ!

ಸುನಾಮಿಯ

ಅಬ್ಬರದ ಅಲೆಗೆ
ಸಾವಿನಲ್ಲೂ
ಸಮಭಾವ

ನಿಜ, ಜೀವಿಗಳೇ

ನಿಸರ್ಗದ ಶಿಶು

ಆದರೂ

ಅಜೈವಿಕಗಳ ಆರ್ಭಟದಲ್ಲಿ

ಸಜೀವಿಗಳೇ ಬಲಿಪಶು!

ನಿಲ್ಲದ ಪ್ರಕೃತಿ ವಿಕೋಪಗಳನ್ನೇ

ಎದುರಿಸಲಾಗದ ನಮಗೆ

ಗಡಿ ಏಕೆ?

ಪಡೆ ಏಕೆ?

ಯುದ್ಧ ಅನಿವಾರ್ಯವೇ?

12 comments:

  1. ತುಂಬಾ ಚೆನ್ನಾಗಿದೆ ಮೇಡಂ.
    ಅಬ್ಬರದ ಅಲೆಗೆ
    ಸಾವಿನಲ್ಲೂ
    ಸಮಭಾವ..ಸುಂದರ ಸಾಲುಗಳು
    Swarna

    ReplyDelete
  2. ಈ ಪ್ರಶ್ನೆಗೆ ಸಮಂಜಸವಾದ ಉತ್ತರ ಹುಡುಕುವಲ್ಲಿ ನಾನು ಸೋತು ಯಾರಾದರೊಬ್ಬರ ಉತ್ತರಕ್ಕೆ ಕಾಯುತ್ತಿದ್ದೇನೆ...
    ನನ್ನ ಅನಿಸಿಕೆ: ಸಾಮ್ರಾಜ್ಯ ವಿಸ್ತರಿಸಬೇಕೆಂಬ ಹಂಬಲ,ಬಲಿಷ್ಟರೆಂದು ತೋರಿಸಿಕೊಳ್ಳಬೇಕೆಂಬ ತುಡಿತ ಇದ್ದಲ್ಲಿ ಯುದ್ಧದ ಅನಿವಾರ್ಯತೆ ಇರುತ್ತದೆ.
    ಶಾಂತಿ,ಸಹಕಾರದಿಂದ ವರ್ತಿಸುತ್ತಾ ಈ ಆಸೆಗಳನ್ನು ಕೈಬಿಟ್ಟರೆ ಎಲ್ಲ ಸುರಕ್ಷಿತ.



    _ನನ್ನ ಬ್ಲಾಗಿಗೂ ಬನ್ನಿ: ಚಿಂತನಾ ಕೂಟ

    ReplyDelete
  3. ವಾಸ್ತವ ಸತ್ಯ ದರ್ಶನ , ಮಾನವ ಸಂಕುಚಿತ ಭಾವನೆಗಳ ಅನಾವರಣ.

    ReplyDelete
  4. ಸತ್ಯವಾದ ಮಾತು!

    ReplyDelete
  5. ನಿಸಗ೯ವನ್ನು ವಿಸಗ೯ ಮಾಡಿ, ಪ್ರಕೃತಿಯನ್ನು ವಿಕೃತಿ ಮಾಡುತ್ತಾ ಮನುಕುಲ ತನ್ನ ವಿನಾಶದ೦ಚಿಗೆ ಪಯಣಿಸುತ್ತಿರುವ ಅನಿವಾರ್ಯತೆಯನ್ನು ಪ್ರಶ್ನಿಸುವ ವಾಸ್ತವ-ವಿಚಾರವನ್ನು ಮ೦ಡಿಸಿದ ಹನಿಗಳು, ಮನಮುಟ್ಟುವ೦ತಿವೆ.

    ಅಭಿನ೦ದನೆಗಳು
    ಅನ೦ತ್

    ReplyDelete
  6. ಖಂಡಿತ ಯುದ್ಧ ಅನಿವಾರ್ಯವಲ್ಲ! ಸುಂದರ ಸಾಲುಗಳು.. ಹಿಂದಿ ಚಿತ್ರ "Refugee"(2000) ರಲ್ಲಿ "ಪಂಚೀ ನದಿಯಾಂ..." ಎಂಬ ಸುಂದರ ಹಾಡೊಂದಿದೆ.. ನಿಮ್ಮ ಸಾಲುಗಲಲ್ಲಿ ಇರುವ ಅರ್ಥಗಳೇ ಆ ಹಾಡಿನಲ್ಲಿಯೂ ಇದೆ.. ಅದು ನೆನಪಾಯಿತು.. ಸುಂದರ ಕವನ.

    ReplyDelete
  7. ಯುದ್ಧ ಖಂಡಿತ ಅನಿವಾರ್ಯ ಅಲ್ಲ...ಮನುಷ್ಯನ ಸ್ವಾರ್ಥತೆ ಒಂದು ಕಡೆಯಿಂದ ಯುದ್ಧಕ್ಕೆ ಕಾರಣ ವಾಗುತ್ತಿದೆ ಎನ್ನಬಹುದು...
    ಕಟು ಸತ್ಯದ ಸಾಲುಗಳು...ಚೆನ್ನಾಗಿದೆ...

    ReplyDelete
  8. ಕವಿತೆಗೆ ಒಳ್ಳೆಯ ಆಶಯವಿದೆ. ನೈಸ್.

    ReplyDelete
  9. ಪ್ರಭಾ ಅವರೇ,
    ಅರ್ಥಪೂರ್ಣವಾದ ಕವನ
    ಯುದ್ಧಕ್ಕೆ ಕೊಡುವ ಮೂರು ಕಾರಣಗಳು - ಸ್ವಯಂ ರಕ್ಷಣೆ, ಗೌರವ ಮತ್ತು ಅತಿ ಅಸೆ
    ಎಲ್ಲಿಯವರೆಗೆ ಮಾನವನಲ್ಲಿ ಈ ಭಾವನೆಗಳು ಇರುತ್ತವೋ ಅಲ್ಲಿಯವರೆಗೆ ಈ ಯುದ್ಧ iddE ಇರುತ್ತೆ

    ReplyDelete
  10. ಮೇಡಂ;ನೈಸರ್ಗಿಕ ವಿಕೋಪಗಳಂತೆ ಯುದ್ಧವೂ ಅನಿವಾರ್ಯವೇ? ಎಲ್ಲರೂ ಚಿಂತಿಸಲೇಬೇಕಾದ ವಿಷಯ.ಕವನದ ಆಶಯ ಚೆನ್ನಾಗಿದೆ.

    ReplyDelete
  11. ತುಂಬಾ ಚೆನ್ನಾಗಿದೆ ಕವಿತೆಯ ಆಂತರ್ಯ.

    ReplyDelete
  12. ಸುಂದರ ಕವನ...ಕವಿತೆಯೊಳಗಿನ ಆಶಯ ಇಷ್ಟ ಆಯಿತು....

    ReplyDelete