Saturday, September 17, 2011

ಮನದ ಅಂಗಳದಿ......... ೫೭. ಕಲಿಕೆ ನಿರಂತರ


ಇತ್ತೀಚೆಗೆ ನಡೆದ ಒಂದು ಶೈಕ್ಷಣಿಕಸಮ್ಮೇಳನದಲ್ಲಿ ಮುಖ್ಯ ಅತಿಥಿಗಳು ಸಂಸ್ಕೃತದ ಶ್ಲೋಕವೊಂದನ್ನುಉದಾಹರಿಸಿ ಆಡಿದ ಮಾತುಗಳುಚಿಂತನಯೋಗ್ಯವಾಗಿದ್ದವು. ‘ಕಲಿಕೆ ನಿರಂತರ’ ಎಂದು ಸಾರುವ ಆಶ್ಲೋಕದ ಅರ್ಥ ಹೀಗಿದೆ :‘ಆಚಾರ್ಯರಿಂದ೧/೪ಭಾಗ, ಸ್ವಂತವಾಗಿ ೧/೪ ಭಾಗ, ಸಹಪಾಠಿಗಳಿಂದ ೧/೪ ಭಾಗ ಹಾಗೂ ಉಳಿದ ೧/೪ಭಾಗವನ್ನು ಜೀವನಾನುಭವಗಳಿಂದಕಲಿಯುತ್ತಾ ಸಾಗಬೇಕು.’ ಅಂದರೆ ನಾವುಇಲ್ಲಿ ಚರ್ಚೆ ಮಾಡುತ್ತಲಿರುವುದು ೧/೪ಭಾಗ ಕಲಿಕೆಯ ಬಗ್ಗೆ ಮಾತ್ರ! ಕಲಿಯುವುದು-ಕಲಿಸುವುದು ಎನ್ನುವುದರಬಗ್ಗೆಯೇ ಸದಾ ಮಾತನಾಡುವ ನಾವು ಈಪದಗಳ ಅಂತರಾಳವನ್ನು ಎಂದಾದರೂಪ್ರವೇಶಿಸಿ ಅರ್ಥಮಾಡಿಕೊಂಡಿದ್ದೇವೆಯೆ? ಎನಿಸಲಾರಂಭಿಸಿತು. ಈ ಸಂದರ್ಭದಲ್ಲಿಕಲಿಕೆಯನ್ನು ಕುರಿತು ಜಿಡ್ಡುಕೃಷ್ಣಮೂರ್ತಿಯವರ ಚಿಂತನೆ ಹೆಚ್ಚುಸೂಕ್ತವೆನಿಸಿ ಅದನ್ನು ನಿಮ್ಮಮುಂದಿಡುತ್ತಿದ್ದೇನೆ. ನಾವುಸಾಧಾರಣವಾಗಿ ಅನುಭವದಿಂದಲೇ ಕಲಿಕೆಎಂದು ತಿಳಿದಿದೇವೆ. ಮುಖ್ಯ ಅತಿಥಿಗಳುಉದಾಹರಿಸಿದ ಸಂಸ್ಕೃತಶ್ಲೋಕದ ತಾತ್ಪರ್ಯವೂ ಅದೇ ಆಗಿದೆ. ಆದರೆ ಜಿಡ್ಡು ಕೃಷ್ಣಮೂರ್ತಿಯವರು ‘ಕಲಿಕೆ ಎಂದರೆ ಅನುಭವವಲ್ಲ’ ಎಂದು ತಿಳಿಸುತ್ತಾ ಹೀಗೆ ವಿವರಿಸುತ್ತಾರೆ:

‘ಕಲಿಕೆ ಎಂಬ ಮಾತಿಗೆ ಬಹಳ ಮಹತ್ವವಿದೆ. ಎರಡು ಬಗೆಯ ಕಲಿಕೆಗಳಿವೆ. ನಮ್ಮಲ್ಲಿ ಅನೇಕರ ಪಾಲಿಗೆ ಕಲಿಕೆ ಎಂದರೆ ಜ್ಞಾನ, ಅನುಭವ, ತಾಂತ್ರಿಕತೆ, ಕೌಶಲ ಅಥವಾ ಭಾಷೆಗಳ ಸಂಗ್ರಹ ಮಾತ್ರವಾಗಿ ಕಾಣುತ್ತದೆ. ಮಾನಸಿಕವಾದ ಕಲಿಕೆಯೂ ಇದೆ. ಅನುಭವಗಳ ಮೂಲಕ ಕಲಿಯುವ ದಾರಿ ಅದು. ಅನುಭವಗಳು ನಮ್ಮ ಬದುಕಿನ ಪ್ರತ್ಯಕ್ಷ ಸಂಗತಿಗಳಿಂದ ಮೂಡಿದವಾಗಿರಬಹುದು. ಇವು ಕೆಲವು ಬಗೆಯ ಶೇಷಗಳನ್ನು ನಮ್ಮಲ್ಲಿ ಉಳಿಸುತ್ತವೆ. ಅಥವಾ ಸಂಪ್ರದಾಯ, ಕುಲ, ಸಮಾಜದಿ೦ದ ದತ್ತವಾದ ಅನುಭವಗಳೂ ಇರುತ್ತವೆ. ಬದುಕುವುದು ಹೇಗೆ ಎಂದು ಕಲಿಸುವ ಎರಡು ಬಗೆಯ ಕಲಿಕೆಗಳು ಇವು: ದೈಹಿಕವಾದ ಕಲಿಕೆ ಮತ್ತು ಮಾನಸಿಕವಾದ ಕಲಿಕೆ. ಒಂದು ಹೊರಗಿನ ಕೌಶಲ, ಇನ್ನೊ೦ದು ಒಳಗಿನ ಕೌಶಲ. ಆದರೆ ಇವೆರಡರ ನಡುವೆ ವಿಭಜನೆಯ ರೇಖೆ ಇರುವುದಿಲ್ಲ. ಒಂದು ಇನ್ನೊಂದರೊಡನೆ ಬೆರೆತಿರುತ್ತದೆ. ಅಧ್ಯಯನ ಮತ್ತು ಅಭ್ಯಾಸದ ಮೂಲಕ ನಾವು ಸಂಗ್ರಹಿಸಿಕೊಳ್ಳುವ ತಾಂತ್ರಿಕ ಕೌಶಲ್ಯದ ಬಗ್ಗೆ ನಾವೀಗ ಮಾತನಾಡುತ್ತಿಲ್ಲ. ನಮಗೆ ಮುಖ್ಯವಾದದ್ದು ಮಾನಸಿಕ ಕಲಿಕೆ. ಇದನ್ನು ನಾವು ಅನೇಕ ಶತಮಾನಗಳಿಂದ ಸಂಗ್ರಹಿಸಿಕೊ0ಡು ಬಂದಿದ್ದೇವೆ. ಅದನ್ನು ಪರಂಪರೆಯೆಂದೋ, ಜ್ಞಾನವೆಂದೋ, ಅನುಭವವೆಂದೋ ಬಳುವಳಿಯಾಗಿ ಪಡೆದಿದ್ದೇವೆ. ಇದನ್ನು ನಾವು `ಕಲಿಕೆ' ಎನ್ನುತ್ತಿದ್ದೇವೆ. ಇದು ನಿಜವಾಗಿ ಕಲಿಕೆ ಹೌದೇ ಎನ್ನುವುದೇ ನನ್ನ ಪ್ರಶ್ನೆ.......ಮನಸ್ಸು ಎಂದಾದರೂ ಹೊಸತಾಗಿ ಕಲಿಯುತ್ತದೆಯೇ? ಈಗಾಗಲೇ ಮನಸ್ಸು ಏನನ್ನೋ ಕಲಿತುಬಿಟ್ಟಿದೆ. ಹಾಗೆ ಕಲಿತದ್ದನ್ನು ಬಳಸಿಕೊಂಡು ಬದುಕಿನ ಸವಾಲುಗಳನ್ನು ಎದುರಿಸುತ್ತದೆ. ನಾವೀಗ ಮಾಡುತ್ತಿರುವುದು ಅದನ್ನೇ. ಇದು ಕಲಿಕೆಯೇ? ಕಲಿಕೆಯೆಂದರೆ ಹೊಸತಾದುದನ್ನು ಕಲಿಯುವುದು ಎಂದು ಅರ್ಥವಲ್ಲವೇ? ನನಗೆ ಈಗಾಗಲೇ ಗೊತ್ತಿಲ್ಲದಿರುವುದನ್ನು ಕಲಿಯುವುದು ಎಂದ ಅರ್ಥವಲ್ಲವೇ? ಈಗಾಗಲೇ ಗೊತ್ತಿರುವುದಕ್ಕೆ ಮತ್ತೆ ಒಂದಷ್ಟು ಸೇರಿಸಿಕೊಳ್ಳುತ್ತಾ ಹೋಗುವುದು ಕಲಿಕೆಯಲ್ಲ.’

ನಾವು ಹೆಚ್ಚು ಕಲಿತವರು ಎನ್ನುವುದನ್ನು ಸಾಬೀತುಪಡಿಸಲು ನಮ್ಮ ಹೆಸರಿನ ಮುಂದೆ ಪದವಿಗಳನ್ನು ಸೇರಿಸಿಕೊಳ್ಳುವ ಪ್ರಯತ್ನವನ್ನು ನಡೆಸುತ್ತೇವೆ. ಮಾಹಿತಿಗಳನ್ನು ಸಂಗ್ರಹಿಸುತ್ತಾ ನಮ್ಮ ಕಲಿಕೆಯನ್ನು ಉತ್ತಮಪಡಿಸಿಕೊಳ್ಳುತ್ತಿದ್ದೇವೆಂದು ಭಾವಿಸುತ್ತೇವೆ. ಹಿರಿಯರು ಮಕ್ಕಳಿಗೆ ವಿವಿಧ ರೀತಿಯ ಒತ್ತಾಯಗಳಿಂದ ಕಲಿಸುವ ಪ್ರಯತ್ನ ನಡೆಸುತ್ತಾರೆ. ಬೇರೊಬ್ಬರೊಡನೆ ಹೋಲಿಸಿ ಸ್ಪರ್ಧೆಗೆ ಒಡ್ಡುತ್ತಾರೆ...... ಇವೆಲ್ಲವನ್ನೂ ಜೆ.ಕೆ. ಅವರ ಚಿಂತನ ಈ ರೀತಿಯಾಗಿ ಒರೆಗೆ ಹಚ್ಚುತ್ತದೆ:

‘ಕಲಿಕೆ ಸಂಗ್ರಹವಲ್ಲ. ನಿರಂತರವಾದ ಚಲನೆ. ಕಲಿಕೆ ಎಂದರೇನು? ಜ್ಞಾನಸಂಗ್ರಹವೆಂದರೆ ಏನು? ಎಂಬ ಪ್ರಶ್ನೆಯನ್ನು ಎಂದಾದರೂ ಕೇಳಿಕೊಂಡಿದ್ದೀರೋ ಇಲ್ಲವೋ, ಗೊತ್ತಿಲ್ಲ. ಕಲಿಕೆಯನ್ನು ಹಾಗೆ ಸಂಗ್ರಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಕಲಿಕೆ ಎಂಬುದು ಒಂದು ಉಗ್ರಾಣದಂತಲ್ಲ. ಏನನ್ನು ಕಲಿತರೂ ಮಾಡುತ್ತಾ ಮಾಡುತ್ತಾ ಕಲಿಯುತ್ತೇವೆ. ಕ್ರಿಯೆಯಲ್ಲಿ ತೊಡಗಿರುವಾಗಲೇ ಕಲಿಯುತ್ತೇವೆ. ಆದ್ದರಿಂದಲೇ ಕಲಿಕೆಯಲ್ಲಿ ಹಿಂತಿರುಗಿ ನೋಡುವುದು ಎಂಬುದಿಲ್ಲ, ಕೊಳೆಯುವುದು ಎಂಬುದಿಲ್ಲ, ಪತನ ಎಂಬುದು ಇಲ್ಲ.’

‘ವಿಚಾರದಲ್ಲಿ ತೊಡಗುವುದು ಮತ್ತು ಕಲಿಯುವುದು, ಇವೆರಡೂ ಮನಸ್ಸಿನ ಕಾರ್ಯಗಳು. ಕಲಿಯುವುದೆಂದರೆ ನೆನಪಿನ ಶಕ್ತಿಯನ್ನು ಬೆಳೆಸಿಕೊಳ್ಳುವುದಲ್ಲ, ಜ್ಞಾನಸಂಗ್ರಹವು ಅಲ್ಲ .ಭ್ರಮೆಗಳಿಲ್ಲದೇ ಸ್ಪಷ್ಟವಾಗಿ ಆಲೋಚಿಸುವ ಸಾಮಾರ್ಥ್ಯ, ನಂಬಿಕೆ ಅಥವಾ ತೀರ್ಮಾನಗಳಿಂದ ಹೊರಡದೇ ಸತ್ಯ ಸಂಗತಿಗಳನ್ನು ಗಮನಿಸುವ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದೇ ನಿಜವಾದ ಕಲಿಕೆ. ಕೇವಲ ಮಾಹಿತಿಯನ್ನೋ, ಜ್ಞಾನವನ್ನೋ ಸಂಗ್ರಹಿಸಿಕೊಳ್ಳುವುದರಿಂದ ಏನನ್ನೂ ಕಲಿತಂತಾಗುವುದಿಲ್ಲ. ಕಲಿಕೆ ಎಂಬುದು ತಿಳುವಳಿಕೆಯ ಬಗ್ಗೆ ಇರುವ ಪ್ರೀತಿಯನ್ನು, ಯಾವುದೇ ಕೆಲಸವನ್ನು ಆ ಕೆಲಸಕ್ಕಾಗಿಯೇ ಮಾಡುವ ಪ್ರೀತಿಯಿಂದ ಮಾಡುವುದನ್ನು ಸೂಚಿಸುತ್ತದೆ. ಯಾವುದೇ ರೀತಿಯ ಒತ್ತಾಯವಿದ್ದಾಗ ಕಲಿಕೆ ಸಾಧ್ಯವಾಗುವುದಿಲ್ಲ. ಒತ್ತಾಯಕ್ಕೆ ಹಲವಾರು ರೂಪಗಳಿರುತ್ತದೆ, ಅಲ್ಲವೇ? ಪ್ರಭಾವದ ಒತ್ತಾಯ, ವ್ಯಾಮೋಹದ ಒತ್ತಾಯ, ಭಯದ ಒತ್ತಾಯ, ಪ್ರೋತ್ಸಾಹದ ಒತ್ತಾಯ, ಸೂಕ್ಷ್ಮವಾದ ಲಾಭಗಳ ಒತ್ತಾಯ ಇವೆಲ್ಲಾ ಇರುತ್ತವೆ.’

ಹೋಲಿಕೆಯ ಮುಖಾಂತರ ಕಲಿಕೆಗೆ ಉತ್ತೇಜನ ದೊರೆಯುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಅದು ಸರಿಯಲ್ಲ. ಹೋಲಿಕೆಯಿಂದ ಹತಾಶೆ ಹುಟ್ಟುತ್ತದೆ. ಅಸೂಯೆ ಬೆಳೆಯುತ್ತದೆ. ಈ ಅಸೂಯೆ ಸ್ಪರ್ಧೆಯ ರೂಪ ತಾಳುತ್ತದೆ. ಇತರ ಒತ್ತಾಯಗಳಂತೆಯೇ ಹೋಲಿಕೆ ಕೂಡ ಕಲಿಕೆಗೆ ಅಡ್ಡಿ ಮಾಡಿ ಭಯವನ್ನು ಹುಟ್ಟಿಸುತ್ತದೆ.

ಕಲಿಕೆ ಎಂಬುದು ಸದಾ ಈ ಹೊತ್ತಿನ, ಈ ಕ್ಷಣದ ಚಟುವಟಿಕೆಯಲ್ಲಿ ಅನುಭವಿಸುತ್ತಾ ಇರುತ್ತದೆ. ಅದಕ್ಕೆ ಭೂತಕಾಲವೆಂಬುದಿಲ್ಲ. ‘ನಾನು ಕಲಿತೆ’ ಎಂದು ನೀವು ಹೇಳಿದ ಕ್ಷಣದಲ್ಲೇ ಕಲಿಕೆಯು ಜ್ಞಾನವಾಗಿ ಬದಲಾಗಿಬಿಟ್ಟಿರುತ್ತದೆ.

ಕಲಿಯಬೇಕೆಂದರೆ, ಮನಸ್ಸು ಸುಮ್ಮನೆ ಇರಬೇಕು. ಕಾಲಾತೀತವಾದುದನ್ನು ಕಾಣಬಯಸುವವರಿಗೆ ಜ್ಞಾನ ಮತ್ತು ಕಲಿಕೆಗಳೇ ಬಹುದೊಡ್ಡ ಆತಂಕಗಳಾಗಿರುತ್ತವೆ.’

12 comments:

 1. ಮೇಡಂ;ಕಲಿಕೆಗೆ ಹೊಸ ಅರ್ಥ ಕಲಿಸಿದಿರಿ.ಕಲಿತುಕೊಳ್ಳುವುದು ಒಂದು ನಿರಂತರ ಪ್ರಕ್ರಿಯೆ.ಬ್ಲಾಗಿಗೆ ಭೇಟಿ ಕೊಡಿ.ನಮಸ್ಕಾರ.

  ReplyDelete
 2. ಕಲಿಕೆ ಅನ್ನುವುದು ಸದಾ ನಮ್ಮೊಂದಿಗಿರಬೇಕು... ಎಷ್ಟೆ ವಯಸ್ಸಾದರು ಕಲಿಯೋದು ಬಹಳ ಇರುತ್ತೆ ಧನ್ಯವಾದಗಳು ಒಳ್ಳೆಯ ಲೇಖನ

  ReplyDelete
 3. ತುಂಬಾ ಸುಂದರ ಬರಹ

  ಕಲಿಕೆ, ಮತ್ತು ಕಲಿಯುವಿಕೆ, ಕಲೆಯುವಿಕೆ ತುಂಬಾ ವ್ಯತ್ಯಾಸ ಇಲ್ಲ
  ಆದರೆ ಅರ್ಥ ಬದಲಿಸುವ ಶಕ್ತಿ ಇವೆ ಆಲ್ವಾ

  ReplyDelete
 4. ಉತ್ತಮ ಲೇಖನ. ಲೇಖನದ ನಡುನಡುವೆ ಇಂಗ್ಲೀಶಿನಲ್ಲಿ ಬೇರೆ ಏನೋ ಬಂದಿದೆ. ಅದನ್ನು ಡಿಲೀಟ್ ಮಾಡಬೇಕು.

  ReplyDelete
 5. ಪ್ರತೀ ದಿನ ಪ್ರತಿ ಘಳಿಗೆ ಹೊಸ ಅನುಭವ ಹಾಗು ಜ್ಞಾನವನ್ನು ಕೊಡುವ ಈ ಜೀವನ ಪೂರ್ಣ ಮನುಷ್ಯವಿದಾರ್ಥಿಯೇ ಅಗಿರುತ್ತಾನೆ. ದಿನವೂ ಅನುಭವ ಪಕ್ವವಾಗಬೇಕು. ಆದರೆ ಅದು ಕೊಳೆಯದಂತೆ ನೋಡುವ ಜವಾಬ್ದಾರಿ ಅದಕ್ಕಿಂತಲೂ ಹಿರಿದು. ಪ್ರತಿಯೋಂದರಲ್ಲು ಕಲಿಯುವ ಅಂಶ ಗುರುತಿಸುವುದಕ್ಕೆ ಅರಿಯಬೇಕು. ಅದನ್ನು ಕಲಿಯುತ್ತಾ ಸಾಗಬೇಕು ಇದುವೇ ಜೀವನ..

  ReplyDelete
 6. @ ಸುನಾಥ್ ರವರೆ,
  ಏನೋ ತೊ೦ದರೆಯಿ೦ದ ಹೀಗಾಗಿತ್ತು. ಈಗ ಸರಿಪಡಿಸಿದ್ದೇನೆ. ನನ್ನ ಲೇಖನವನ್ನು ಇಷ್ಟಪಟ್ಟು, ಮೆಚ್ಚುಗೆಯನ್ನು ತಿಳಿಸಿ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್. ಬರುತ್ತಿರಿ.

  ReplyDelete
 7. @ಡಾ. ಕೃಷ್ಣ ಮೂರ್ತಿಯವರೆ,
  @ ಸುಗುಣ ರವರೆ,
  @ಗುರುಮೂರ್ತಿಯವರೆ,
  @ರಾಜ್ ರವರೆ,
  ಕಲಿಕೆಯ ಬಗ್ಗೆ ಹೊಸ ಹೊಳಹುಗಳನ್ನು ನೀಡಿ ಆತ್ಮೀಯವಾಗಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ನಿಮ್ಮೆಲ್ಲರಿಗೂ ಹೃತ್ಪೂರ್ವಕ ನಮನಗಳು.ಬರುತ್ತಿರಿ.

  ReplyDelete
 8. ಪ್ರಭಾಮಣಿಯವರೇ, ನಿಮಗೆ ಕಲಿಕೆಯ ಬಗ್ಗೆ ಅಧಿಕೃತವಾಗಿ ಹೇಳುವ ಶಕ್ತಿ ಮತ್ತು ಅನುಭವ ಇದೆ. ಅದನ್ನು ಸಮರ್ಥವಾಗಿ ಮತ್ತು ಅರ್ಥಯುತವಾಗಿ ಹೊರಹೊಮ್ಮಿದೆ. ಶ್ರೀ ಜಿಡ್ಡು ಕೃಷ್ನಮೂರ್ತಿಯವರ ಚಿಂತನೆ ಮನನಾರ್ಹ. ಧನ್ಯವಾದಗಳು.

  ReplyDelete
 9. "ಕಲಿಕೆ ಸಂಗ್ರಹವಲ್ಲ. ನಿರಂತರವಾದ ಚಲನೆ " ಸುಂದರವಾದ ಬರಹ ಮೇಡಂ

  ಧನ್ಯವಾದಗಳು ..

  ReplyDelete
 10. magu eradu varshakke
  maatu kalitare,manushya
  kadeyavaregu kaliyuttale iruttaane.vichaarapoorna lekhana prabhamaniyavare.dhanyavaadagalu.

  ReplyDelete
 11. ಕಲಿಕೆಯ ಬಗ್ಗೆ ಕಲೆ ಹಾಕಿರುವ ಮಾಹಿತಿ ಬಹಳ ಸಂತೋಷ ಕೊಟ್ಟಿತು .. ಮತ್ತೊಮ್ಮೆ ಧನ್ಯವಾದಗಳು ...
  {ಬಿಡುವಿಲ್ಲದ ಕಾರಣ , ತಡವಾಗಿ ಓದಿ ಪ್ರತಿಕ್ರಿಯೆ ನೀಡುತಿದ್ದೇನೆ}

  ReplyDelete