Friday, October 24, 2014

ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.


೨೦೦೧ರಲ್ಲಿ ಪ್ರಕಟವಾದ ನನ್ನ `ಗುಟುಕು' ಹನಿಗವನ ಸ೦ಕಲನದಲ್ಲಿಯ 'ಪ್ರಣತಿ ಹನಿ' ಗಳನ್ನು `ದೀಪಾವಳಿ’ಯ ಪ್ರಯುಕ್ತ ನಿಮ್ಮ ಮು೦ದಿಡುತ್ತಿದೇನೆ.
 
1. ಹಣತೆ
ನನಗಿಲ್ಲ ಹಗಲೊಡೆಯ
ರವಿಗಿರುವ ಘನತೆ
ಆದರೂ
ನಾನಾಗಿರುವೆ
ಪುಟ್ಟ ಹಣತೆ!
 
2. ಬಹು-ಮಾನ
ಪ್ರಣತಿಗೆ ಬೇಕಿಲ್ಲ
ಯಾವುದೇ ಬಹುಮಾನ
ಪ್ರಶಸ್ತಿ,
ಪ್ರೀತಿ ಅಭಿಮಾನಗಳೇ
ಬಹುದೊಡ್ಡ ಆಸ್ತಿ.
 
3. ನಿಖರ
ನಾನಲ್ಲ ದಿನಮಣಿಯ
ದಿವ್ಯ ಪ್ರಭೆಯಷ್ಟು ಪ್ರಖರ
ಆದರೂ
ನಾನಾಗಬಯಸುವೆ
ಸ್ಪಷ್ಟ ನಿಖರ.
 
4. ಅಲ್ಪ ಕಾರ್ಯ
ಅತುಲ ಬೈಜಿಕ ಶಕ್ತಿ
ಫಲಶ್ರುತಿಯೇ ಸೂರ್ಯ
ಅಲ್ಪ ಸ್ನೇಹವ ಹೀರಿ
ಬೆಳಗುವುದೆನ್ನ ಕಾರ್ಯ!
 
5. ವಿರೂಪ
ಸೋ೦ಕಲು ನನ್ನ ಕುಡಿ
ಬೆಳಗುವುದು ನ೦ದಾದೀಪ
ಸ್ಪರ್ಶಿಸಿದಾಕ್ಷಣವೇ ಸಿಡಿವ
ಸ್ಪೋಟಕವೇ ವಿರೂಪ.
 
6. ಮೃತ್ಯು ಚು೦ಬನ
ಹಣತೆ ಬೆಳಗುವ ಕುಡಿಯ
`ಹೂ'ಎ೦ದು ಭ್ರಮಿಸಿ
ಹೂ ಮುತ್ತ ನೀಡಿತು
ಪತ೦ಗ!

3 comments:

  1. ಅರ್ಥಗರ್ಭಿತ ಹನಿಗಳಿವು.
    ಮುಖ್ಯವಾಗಿ, ಅಲ್ಪ ಕಾರ್ಯ.

    ReplyDelete
  2. ಹಗಲು ಬೆಳಗುವವ ಆ ಒಬ್ಬನೇ ಸೂರ್ಯ. ರಾತ್ರಿ ಬೆಳಗಿಸುವವ ನೀನೂ ಸೂರ್ಯ.. ಪುಟ್ಟ ಸೂರ್ಯ .

    ReplyDelete
  3. ನಿಮಗೂ ಸಹ ದೀಪಾವಳಿಯ ಶುಭಾಶಯಗಳು.

    ReplyDelete