Wednesday, October 22, 2014

ವೃತ್ತಿ ಜೀವನದ ಅ೦ತಿಮ ಹ೦ತದಲ್ಲೊ೦ದು ಅವಿಸ್ಮರಣೀಯ ಕ್ಷಣ:ದಿನಾ೦ಕ ೨೦-೧೦-೨೦೧೪ರ೦ದು ಡಿ.ಎಸ್..ಆರ್.ಟಿ., ಬೆ೦ಗಳೂರಿನಲ್ಲಿ ಮಾನ್ಯ ನಿರ್ದೇಶಕರು ರಾಜ್ಯದ ಎಲ್ಲಾ ಜಿಲ್ಲೆಗಳ ಗಣಿತ ವಿಷಯ ಪರಿವೀಕ್ಷಕರ  ಸಭೆಯನ್ನು ಕರೆದಿದ್ದರು. ಇದೊಂದು ವಿಶಿಷ್ಟವಾದ ಕಾರ್ಯಕ್ರಮವಾಗಿದ್ದು  ಎಲ್ಲ ಗಣಿತ ವಿಷಯ ಪರಿವೀಕ್ಷಕರೂ UÀtÂvÀ ವಿಷಯಕ್ಕೆ ಸ೦ಬ೦ಧಿಸಿದ೦ತೆ  ತಮ್ಮ ಜಿಲ್ಲೆಯಲ್ಲಿ ಮಕ್ಕಳು ಹಾಗೂ ಶಿಕ್ಷಕರಿಗೆ  ಕೈಗೊ೦ಡಿರುವ ವಿಶೇಷ ಕಾರ್ಯಕ್ರಮಗಳ ಬಗ್ಗೆ ಪಿ.ಪಿ.ಟಿ. ಯನ್ನು  ೧೦-೧೫ ನಿಮಿಷಗಳ ಅವಧಿಯಲ್ಲಿ ಮ೦ಡಿಸಬೆಕಾಗಿತ್ತು. ಮಾನ್ಯ ನಿರ್ದೇಶಕರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿತ್ತು. ಸಭೆಯ ಅ೦ತಿಮ ಹ೦ತದಲ್ಲಿ ಮಾನ್ಯ ನಿರ್ದೇಶಕರು ನನಗೆ ಪುಷ್ಪಗುಚ್ಚವನ್ನು ನೀಡಿ ಶುಭ ಹಾರೈಸಿದರು. ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರೋತ್ಸಾಹನೀಡುವ ಮಾನ್ಯ ನಿರ್ದೇಶಕರಿಗೆ, ಹೃದಯಪೂರ್ವಕವಾಗಿ ಬೀಳ್ಗೊ೦ಡ ಶಾ೦ತಲಾ ಮೇಡ೦ರವರಿಗೆ, ಸ೦ಬ೦ಧಪಟ್ಟ ಎಲ್ಲರಿಗೂ ಹಾಗೂ ಸ೦ತಸದಲ್ಲಿ ಪಾಲ್ಗೊ೦ಡ ಎಲ್ಲ ಗಣಿತ ವಿಷಯ ಪರಿವೀಕ್ಷಕರಿಗೂ ನನ್ನ ಅನೇಕ ಧನ್ಯವಾದಗಳು.

 
 p.c.: ವೇದಮೂರ್ತಿ, ಗಣಿತ ವಿಷಯ ಪರಿವೀಕ್ಷಕರು, ಮಧುಗಿರಿ

3 comments:

 1. ಗುಣಕ್ಕೆ ಮನ್ನಣೆ ದೊರೆಯಲೇ ಬೇಕಲ್ಲವೆ?!

  ReplyDelete
 2. ಮೇಡಂ ಅವರೇ, ನನಗೆ ಗಣಿತವೆಂದರೆ ಬಲು ಭಯ ಕಣ್ರೀ!


  shared at:
  https://www.facebook.com/photo.php?fbid=602047969839656&set=gm.483794418371780&type=1&theater

  ReplyDelete
 3. ಸಂತೋಷದ ಸಂಗತಿ.. ಇಂತಹ ಕ್ಷಣಗಳು ಮತ್ತೆ ಮತ್ತೆ ಬರುತ್ತಿರಲಿ.

  ReplyDelete