Saturday, September 3, 2011

ಕಿಡಿ

ಬಿದ್ದದ್ದು ಒ೦ದೇ ಕಿಡಿ

ಅತ್ತಿತ್ತ ಅಡರಿ

ಸುಯ್ಯನೆ ಗಾಳಿ

ಬೀಸಿದಾಗ

ಸುತ್ತಲೂ ಹಬ್ಬಿ

ಭುಗ್ಗನೆ ಮೇಲೆದ್ದು

ಕೆನ್ನಾಲಿಗೆ ಚಾಚಿ

ಸುತ್ತೆಲ್ಲಾ

ತನ್ನತ್ತ ಸೆಳೆದ

ಕಬ೦ಧ ಬಾಹು

ಎತ್ತರೆತ್ತರಕ್ಕೆ

ಭುಗಿಲೆದ್ದ ಬೆ೦ಕಿ

ಚಟಪಟನೆ ಸಿಡಿವ

ಹಸಿ ರೆ೦ಬೆಗಳು

ತೈಲವಿದ್ದಷ್ಟೂ

ತಾಪ ಜಾಸ್ತಿ!

ಮೌನದಿ ತಮ್ಮ

ತಾವೇ ಅರ್ಪಿಸಿಕೊ೦ಡ

ಒಣ ಪುಳ್ಳೆಗಳು

ಎಲ್ಲವನೂ

ತನ್ನುದರಕ್ಕೆ ಸೇರಿಸುವ

ಆತುರದ ಸಮಭಾವ

ಏರಿದ೦ತೆ ಇಳಿದಿಳಿದು

ಭೂ ಗರ್ಭ

ಸೇರಿದ ಕಿಚ್ಚು

ಎಲ್ಲೆಲ್ಲೂ

ಮಸಿಮೋಟು

ದಟ್ಟ ಹೊಗೆ

ಒಡಲೊಳಗಿನ್ನೂ

ಬಡಬಾಗ್ನಿ

ಹೊರಬರಲು

ಚಡಪಡಿಸುತಿದೆ..!


9 comments:

  1. ಒಡಲೊಳಗಿನ ಬಡಬಾಗ್ನಿ ಪ್ರಜ್ವಲಿಸಲು ಹೊರಗಿನ ಒ೦ದು ಕಿಡಿಯ ಅವಶ್ಯಕತೆ ಇದೆ..
    ಉತ್ತಮ ಕವನಕ್ಕೆ ಅಭಿನ೦ದನೆಗಳು ಮೇಡ೦.

    ಅನ೦ತ್

    ReplyDelete
  2. ಒಂದು ಕಿಡಿಯ ಒಡಲೊಳಗಿರುವ ಬಡಬಾಗ್ನಿ! ನಿಮ್ಮ ಹನಿಗವನಗಳೂ ಸಹ ಹಾಗೆಯೇ ಇವೆ!

    ReplyDelete
  3. ಕವನ ಒಂದು ಒಳ್ಳೆಯ ಕುಸುರಿಯ ಕಲೆಯಂತೆ ಮೂಡಿ ಬಂದಿದೆ ಮೇಡಂ.ತುಂಬಾ ಇಷ್ಟವಾಯಿತು.ಅಭಿನಂದನೆಗಳು.ಬ್ಲಾಗಿಗೆ ಭೇಟಿಕೊಡಿ.ನಮಸ್ತೆ.

    ReplyDelete
  4. ಒಳ್ಳೆಯ ಕವನ....ಬಡಬಾಗ್ನಿಯ ಪ್ರಖರತೆ ಚೆನ್ನಾಗಿ ಮೂಡಿಬಂದಿದೆ.

    ReplyDelete
  5. adbhuta saalugalu...kidiya prakharateya jotege kavanada prakharathe...chennagide...abhinandanegalu...

    ReplyDelete
  6. ಕಲಿಕೆ ನಿರಂತರ....ಅದು ಎಂದಿಗೂ ನಿಲ್ಲಬಾರದು.....ಒಮ್ಮೆ ನಿಂತರೆ ಅದು ನಾವು ಇದುವರೆಗೂ ಕಲಿತ ವಿದ್ಯೆಗೆ ಅಪಮಾನ ಮಾಡಿದ ಹಾಗೆ ಎಂಬುದು ನನ್ನ ಅನಿಸಿಕೆ....ಕಲಿಕೆ ಬಗ್ಗೆ ಒಳ್ಳೆಲೇಖನ ಕೊಟ್ಟಿದ್ದೀರಿ...
    (ಕಲಿಕೆ ನಿರಂತರ ಲೇಖನಕ್ಕೆ ಕಾಮೆಂಟ್ ಮಾಡಲು ಸಾಧ್ಯವಾಗುತ್ತಿಲ್ಲ....Google reader ನಲ್ಲಿ ಸರಿಯಾಗಿ ಓದಲು ಆಗುತ್ತಿದೆ..ಬ್ಲಾಗ್ನಲ್ಲಿ ಈ ಲಿಂಕ್ ಸರಿಯಾಗಿ ಕಾಣುತ್ತಿಲ್ಲ...)

    ReplyDelete
  7. prabhaamaniyavare,kidiya
    prakharateyannu arthapoornavaagi hididittiddiira.abhinandanegalu.

    ReplyDelete
  8. ಉತ್ತಮ ಸಾಲುಗಳು

    ReplyDelete